ಲೋಕಾಯುಕ್ತದಲ್ಲಿ ಅಂದಾಜು 40 ಸಾವಿರ ದೂರುಗಳು ಸಲ್ಲಿಕೆಯಾಗಿವೆ. ಅದರಲ್ಲಿ 10-20 ಸಾವಿರ ಸುಳ್ಳು ಪ್ರಕರಣಗಳಾಗಿವೆ. ಇದರಿಂದಾಗಿ ನೈಜ ದೂರುಗಳಿಗೆ ನ್ಯಾಯ ನೀಡುವ ಪ್ರಕ್ರಿಯೆ ತಡವಾಗುತ್ತಿದೆ. ಸುಳ್ಳು ಕೇಸು ಹಾಕಿರುವುದು ಸಾಬೀತಾದರೆ ಜೈಲು ಶಿಕ್ಷೆ ವಿಧಿಸಬಹುದು. ನ್ಯಾಯಾಂಗ ಮತ್ತು ಪತ್ರಿಕಾ ರಂಗವು ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ. ಕೆಲವೆಡೆ ಲೋಕಾಯುಕ್ತ ದಾಳಿ ನಡೆಸಿದ ಸಂದರ್ಭದಲ್ಲಿ ಬೆದರಿಕೆ ಹಾಕಿರುವ ಪ್ರಸಂಗಗಳಿವೆ. ಆದರೆ,ಯಾವ ಬೆದರಿಕೆಗಳಿಗೂ ನಾನು ಬಗ್ಗುವುದಿಲ್ಲ ಎಂದರು.