ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಈ ದಿನವನ್ನು ಶ್ರೀರಾಮ ಮತ್ತು ಸೀತೆಯ ವಿವಾಹದ ಸಂಕೇತವಾಗಿ ಶ್ರೀರಾಮ ಸೀತಾ ಕಲ್ಯಾಣೋತ್ಸವನ್ನಾಗಿ ಆಚರಿಸುವ ಸಂಪ್ರದಾಯವೂ ಇದೆ. ಹಬ್ಬದ ಅಂಗವಾಗಿ ಮನೆಮನೆಗಳಲ್ಲಿ ಪಾನಕ, ಮಜ್ಜಿಗೆ ಮತ್ತು ಕೋಸಂಬರಿಯನ್ನು ಪ್ರಸಾದವಾಗಿ ಹಂಚುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಒಟ್ಟಾರೆಯಾಗಿ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರಲು ಮತ್ತು ಸನ್ಮಾರ್ಗದಲ್ಲಿ ನಡೆಯುವ ಸ್ಫೂರ್ತಿ ಪಡೆಯಲು ಭಾರತೀಯರು ರಾಮನವಮಿಯನ್ನು ಆಚರಿಸುತ್ತಾರೆ,(ಏಜನ್ಸೀಸ್).