ಪ್ರಿಯಕರ ದಿಲೀಪ್ ಜತೆಗೂಡಿ ಅಭಿಷೇಕ್ ಎಂಬಾತನನ್ನು ಸಂಪರ್ಕಿಸಿದ ಸೌಮ್ಯಾ, ಜಿತೇಂದರ್ ಎಂಬ ವ್ಯಕ್ತಿಗೆ ತನ್ನ ಪತಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದಳು. ಇದಕ್ಕಾಗಿ, ತನ್ನ ಬಳಿಯಿದ್ದ ಚಿನ್ನವನ್ನು ಅಡವಿಟ್ಟು ಕೊಲೆಗಾರರಿಗೆ ಮುಂಗಡವಾಗಿ 35,000 ರೂ. ಅಡ್ವಾನ್ಸ್ ಕೂಡ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಅಸಲಿಗೆ, ಆಕೆ ಹೇಳಿದ್ದ ದಿನದಂದು ಇನ್ನೂ ಮೂವರೊಂದಿಗೆ ಸ್ಥಳದಲ್ಲಿ ಹಾಜರಾಗಬೇಕಿದ್ದ ಜತೇಂದರ್ ಸೌಮ್ಯಾಳಿಗೆ ಕೈಕೊಟ್ಟಿದ್ದ. ಇದರಿಂದ ಕಂಗಾಲಾದ ಕಿರಾತಕಿ, ಮುಂದೇನು ಮಾಡಬೇಕು ಎಂದು ತಿಳಿಯದೆ, ದಿಲೀಪ್ ಜತೆ ಸೇರಿ ತಾನೇ ಗಂಡನನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ.