ಅಣ್ಣಾಮಲೈ ಬೆನ್ನಲ್ಲೇ ಬಿಜೆಪಿಯಿಂದ ಇಬ್ಬರು ನಾಯಕರ ಎಕ್ಸಿಟ್; 'ಭಾರವಾದ ಹೃದಯದಿಂದ ಪಕ್ಷ ತೊರೆಯುತ್ತಿದ್ದೇನೆ' ಎಂದು ಪೋಸ್ಟ್
Sumathi Venkatesh Quits BJP
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿಜೆಪಿಗೆ ಅಧಿಕೃತವಾಗಿ ಗುಡ್ ಬೈ ಹೇಳಿದ ಅಣ್ಣಾಮಲೈ
ಅಣ್ಣಾಮಲೈ ರಾಜೀನಾಮೆ ಬೆನ್ನಲ್ಲೇ ಇನ್ನಿಬ್ಬರು ನಾಯಕರು ಎಕ್ಸಿಟ್
ಪ್ರಧಾನಿ ಮೋದಿಯವರ ಕಾರ್ಯ, ದೇಶ ಪ್ರೇಮ, ಸೇವೆಯು ಪ್ರೇರಣೆ ಎಂದು ಸುಮತಿ ಪೋಸ್ಟ್
ಚೆನ್ನೈ: ತಮಿಳುನಾಡಿನ ಬೆಳವಣಿಗೆ ಹಾಗೂ ಸಾಂಸ್ಕೃತಿಕ ಬೇರುಗಳನ್ನು ಒಳಗೊಂಡ ರಾಜಕಾರಣದ ಬಗ್ಗೆ ನನ್ನ ವಿಚಾರಗಳು ಪಕ್ಷದ ಹಿರಿಯ ನಾಯಕರೊಂದಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ ನೀಡಿದರು. ಆ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಕರು ನಾಗರಾಜನ್ ಮತ್ತು ಕಾರ್ಯದರ್ಶಿ ಸುಮತಿ ವೆಂಕಟೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಮತಿ ಎಕ್ಸ್ ಫೋಸ್ಟ್ನಲ್ಲಿ ಏನಿದೆ?
ಎಕ್ಸ್ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಕಾರ್ಯದರ್ಶಿ ಸುಮತಿ ವೆಂಕಟೇಶ್ ಭಾರವಾದ ಹೃದಯದಿಂದ ನಾನು ಭಾರತ ಜನತಾ ಪಕ್ಷದ ತಮಿಳುನಾಡು ರಾಜ್ಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಯಲು ಮತ್ತು ಪಕ್ಷದೊಂದಿಗಿನ ನನ್ನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮೋದಿಯವರ ಕಾರ್ಯ ಸದಾ ಪ್ರೇರಣೆ
ಪ್ರಧಾನಿ ಮೋದಿಯವರ ನಾಯಕತ್ವ, ಕಾರ್ಯವೈಖರಿ, ಬಿಜೆಪಿ ಪ್ರತಿಪಾದಿಸುವ ರಾಷ್ಟ್ರೀಯತೆ, ದೇಶಭಕ್ತಿ, ಸೇವೆಯಂತಹ ಆದರ್ಶದಿಂದ ನಾನು ಸದಾ ಪ್ರೇರಿತಳು. ಇವು ನನ್ನ ಪಯಣದುದ್ದಕ್ಕೂ ನನಗೆ ಮಾರ್ಗದರ್ಶನ ಕೊಟ್ಟಿದೆ. ಮುಂದೆಯೂ ನೀಡಲಿದೆ.
ರಾಜೀನಾಮೆ ನೀಡುವ ನಿರ್ಧಾರವನ್ನು ಬಹಳ ಜಾಗರೂಕವಾಗಿ ಚಿಂತಿಸಿ ತೆಗೆದುಕೊಂಡಿದ್ದೇನೆ. ಅಧಿಕಾರಾವಧಿಯಲ್ಲಿ ಮಾರ್ಗದರ್ಶನ, ಬೆಂಬಲ ಮತ್ತು ಪ್ರೋತ್ಸಾಹ ನೀಡಿದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಎಲ್ಲಾ ಪಕ್ಷದ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ನಾನು ಪ್ರಾಮಾಣಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕರು ನಾಗರಾಜನ್ ಯಾರು?
ಕರು ನಾಗರಾಜನ್ ಅವರು ಎರಡು ಪ್ರಮುಖ ರಾಜ್ಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ, ಅದರಲ್ಲಿ 2016 ರ ಮೈಲಾಪುರ ವಿಧಾನಸಭಾ ಚುನಾವಣೆ ಮತ್ತು 2017 ರ ಆರ್‌ಕೆ ನಗರ ಉಪಚುನಾವಣೆ ಕೂಡ ಒಂದು. ಆದರೆ, ಎರಡು ಬಾರಿ ಸ್ಪರ್ಧಿಸಿ ಸೋತರು. ಕರು ನಾಗರಾಜನ್ ಅವರು ಸ್ಥಳೀಯ ಮಾಧ್ಯಮಗಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿ ಹೆಚ್ಚಾಗಿ ಮಾತನಾಡಿದ್ದಾರೆ
ನಾವೇ ಬದಲಾವಣೆ ತರೋಣ, ಜೊತೆಯಾಗಿ ಹೆಜ್ಜೆ ಹಾಕಿ ಎಂದು ಅಣ್ಣಾಮಲೈ ಅವರು ಡಿಜಿಟಲ್ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಇದಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಳ್ಳುವ ಮೂಲಕ ಬೆಂಬಲ ಸೂಚಿಸಿದ್ದಾರೆ. ವ್ಯಕ್ತಿ ಪೂಜೆ ಮತ್ತು ವಂಶಪಾರಂಪರ್ಯ ರಾಜಕಾರಣವನ್ನು ಕೊನೆಗಾಣಿಸಲು ತಮ್ಮೊಂದಿಗೆ ಕೈಜೋಡಿಸುವಂತೆ ಯುವಜನತೆಗೆ ಅಣ್ಣಾಮಲೈ ಕರೆ ನೀಡಿದ್ದಾರೆ, (ಏಜೆನ್ಸೀಸ್).