ಜೆಡಿಯು ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ 2 ಲಕ್ಷ ರೂ. ನೀಡುವ ಭರವಸೆ ಈಡೇರಿಸಿದ್ರೆ ರಾಜಕೀಯ ನಿವೃತ್ತಿ; ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಾನೇ ಹೊಣೆ-ಪ್ರಶಾಂತ್ ಕಿಶೋರತ್
  • ಬಿಹಾರದಲ್ಲಿ ಮೊದಲ ಬಾರಿಗೆ ಸರ್ಕಾರವು ಜನರಿಗಾಗಿ 40,000 ಕೋಟಿ ರೂ. ಖರ್ಚು
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲದೇ ಹೀನಾಯ ಸೋತಿರುವ ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್(Prashant Kishor) ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಸರ್ಕಾರವನ್ನು ಬದಲಾಯಿಸದಿದ್ದಕ್ಕೆ ಮತ್ತು ಪಕ್ಷದ ಸೋಲಿಗೆ ನಾನೇ ಹೊಣೆ ಹೊರುತ್ತೇನೆ ಎಂದು ಮಂಗಳವಾರ(ನ. 18) ಹೇಳಿದ್ದಾರೆ.
ಈ ಕುರಿತು ಪಾಟ್ನಾದಲ್ಲಿ ಮಾತನಾಡಿರುವ ಅವರು, ನಮ್ಮ ಕಡೆಯಿಂದ ಗೆಲ್ಲಲು ಸಕರಾತ್ಮಕವಾಗಿ ಪ್ರಯತ್ನಿಸಿದೆವು, ಆದರೆ ಸರ್ಕಾರವನ್ನು ಬದಲಾಯಿಸಲು ಆಗಲಿಲ್ಲ. ಈ ಸರ್ಕಾರವನ್ನು ಬದಲಾಯಿಸಲು ವಿಫಲರಾಗಿದ್ದೇವೆ. ಬಿಹಾರ ರಾಜಕೀಯ ಬದಲಾಯಿಸುವಲ್ಲಿ ನಾವು ಸ್ವಲ್ಪ ಪಾತ್ರವಹಿಸಿದ್ದೇವೆ. ನಮ್ಮ ಆಲೋಚನೆ ಮತ್ತು ಜನರಿಗೆ ಅರ್ಥ ಮಾಡಿಸುವಲ್ಲಿ ನಾವು ಸೋತಿದ್ದೇವೆ ಎಂದು ತೋರುತ್ತದೆ ಎಂದಿದ್ದಾರೆ.
ಜೆಡಿಯು 25 ಸ್ಥಾನ ಗೆದ್ದರೆ ನಿವೃತ್ತಿ ಎಂಬ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಹಾರವನ್ನು ತೊರೆಯುತ್ತೇನೆ ಎಂದು ಭಾವಿಸುವವರಿಗೆ ಅದು ತಪ್ಪು. ನೀವು ರಾಜೀನಾಮೆ ನೀಡುವವರೆಗೂ ನಾವು ಸೋಲುವುದಿಲ್ಲ. ಜೆಡಿಯು 25 ಸ್ಥಾನಗಳನ್ನು ಗೆದ್ದಿದೆ ಎಂಬ ನನ್ನ ಹೇಳಿಕೆಯ ಬಗ್ಗೆ ಜನರು ಬಹಳಷ್ಟು ಮಾತನಾಡುತ್ತಿದ್ದಾರೆ. ನಾನು ಆ ಹೇಳಿಕೆಗೆ ಈಗಲೂ ಬದ್ಧನಾಗಿರುತ್ತೇನೆ. ನಿತೀಶ್ ಕುಮಾರ್ ಅವರು 1.5 ಕೋಟಿ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ, ಮತ್ತು ಸ್ವ ಉದ್ಯೋಗ ಅಡಿ 2 ಲಕ್ಷ ರೂ.ಗಳನ್ನು ನೀಡುವ ಭರವಸೆ ನೀಡಿದ್ದರಿಂದ ಮಹಿಳೆಯರು ಮತ ಹಾಕಿದ್ದರಿಂದ ಅವರು ಗೆದ್ದಿದ್ದಾರೆ. ಇದು ನಿಜವಾದ ಕಾರಣವಲ್ಲ ಅಂತ ಸಾಬೀತು ಪಡಿಸಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಹೇಳಿದ್ದಾರೆ.
ಸ್ವತಂತ್ರ ಭಾರತದಲ್ಲಿ, ವಿಶೇಷವಾಗಿ ಬಿಹಾರದಲ್ಲಿ ಮೊದಲ ಬಾರಿಗೆ ಸರ್ಕಾರವು ಜನರಿಗಾಗಿ 40,000 ಕೋಟಿ ರೂ. ಖರ್ಚು ಮಾಡುವುದಾಗಿ ಭರವಸೆ ನೀಡಿತು. ಅದಕ್ಕಾಗಿಯೇ ಎನ್‌ಡಿಎ ಇಷ್ಟು ದೊಡ್ಡ ಬಹುಮತವನ್ನು ಗಳಿಸಿತು. ಇಲ್ಲಿನ ಜನರು ತಮ್ಮ ಭವಿಷ್ಯ ಅಥವಾ ಮಕ್ಕಳ ಭವಿಷ್ಯವನ್ನು ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಹಾರದ 243 ವಿಧಾನಸಭಾ ಸ್ಥಾನಗಳಲ್ಲಿ 238 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ಒಂದು ಸ್ಥಾನದಲ್ಲೂ ಗೆಲ್ಲಲಿಲ್ಲ. ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ನೇತೃತ್ವದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು 202 ಸ್ಥಾನಗಳನ್ನು ಅಧಿಕಾರವನ್ನು ಉಳಿಸಿಕೊಂಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net