ರೈಲು ಮಿಸ್ ಆದಾಗ, ಅದೇ ಟಿಕೆಟ್ ಬಳಸಿ ಬೇರೆ ರೈಲಿನಲ್ಲಿ ಪ್ರಯಾಣಿಸುವ ಮಂದಿ ನಮ್ಮಲ್ಲಿ ಹೆಚ್ಚಿದ್ದಾರೆ. ಕಾರಣ, ಸರಿಯಾದ ಸಮಯಕ್ಕೆ ಹೊರಡುವ ಆಯಾ ರೈಲುಗಳನ್ನು ಮಿಸ್ ಮಾಡಿಕೊಂಡಾಗ, ಬೇರೆ ದಾರಿಯಲ್ಲದೆ, ಅದೇ ಟಿಕೆಟ್ ಇಟ್ಟುಕೊಂಡು ಮತ್ತೊಂದು ರೈಲಿಗೆ ಹತ್ತುವ ಜನರೇ ಹೆಚ್ಚು. ಹೀಗೆ ಮಾಡುವುದರಿಂದ ತಮ್ಮ ಗಮ್ಯ ಸ್ಥಳಗಳಿಗೆ ತಲುಪಬಹುದು. ಆದರೆ, ಎಲ್ಲ ಸಮಯದಲ್ಲೂ ಅಧಿಕಾರಿಗಳ ಕಣ್ತಪ್ಪಿಸಿ, ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವೇ ಇಲ್ಲ. ಮಿಸ್ ಮಾಡಿಕೊಂಡ ರೈಲಿನ ಟಿಕೆಟ್ ಹಣ ವಾಪಸ್ ಪಡೆಯಬಹುದಾ ಅಥವಾ ಅದರ ಹಿಂದೆಯೇ ಬರುವ ಮತ್ತೊಂದು ರೈಲಿನಲ್ಲಿ, ಅದೇ ಟಿಕೆಟ್‌ನಲ್ಲಿ ಪ್ರಯಾಣಿಸಬಹುದಾ ಎಂಬ ಗೊಂದಲಗಳಿಗೆ ಭಾರತೀಯ ರೈಲ್ವೆ ಇಲಾಖೆಯ ನಿಯಮಗಳು ಹೇಳುವುದೇನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.