ಕೃಷಿಕ-ರಾಜಕೀಯ ಕುಟುಂಬದಿಂದ ಬಂದಿರುವ ಸುನೇತ್ರಾ, ಕೇವಲ ರಾಜಕಾರಣಿಯಲ್ಲದೆ, ಅವರು ಸಾಮಾಜಿಕ ಕಾರ್ಯಕರ್ತೆಯಾಗಿ, ಕೈಗಾರಿಕೋದ್ಯಮಿ ಜತೆಗೆ ಶೈಕ್ಷಣಿಕ ಆಡಳಿಗಾರ್ತಿಯಾಗಿ ತಮ್ಮನ್ನು ತಾವು ಗುರುತಿಸಿ ಕೊಂಡಿದ್ದಾರೆ. ಆರು ಬಾರಿ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಪತ್ನಿಯಾಗಿದ್ದರೂ ಸಹ ಸುನೇತ್ರಾ ಎಂದಿಗೂ ತಮ್ಮ ಪತಿಯ ಹೆಸರಿನಲ್ಲಿ ರಾಜಕೀಯ ಮಾಡದೇ ತಮ್ಮದೇ ಆದ ಛಾಪನ್ನು ನಿರ್ಮಿಸಿಕೊಂಡವರಾಗಿದ್ದಾರೆ.