ಸಿನಿಮಾ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟ ವಿಲನ್ ಪ್ರಿಯಕರ: ಹಸೆಮಣೆಯಲ್ಲೇ ವಧುವಿನ ಮೇಲೆ ಫೈರಿಂಗ್; ವಿಡಿಯೋ ವೈರಲ್​ | Wedding Firing

ಹಸೆಮಣೆಯಲ್ಲೇ ವಧುವಿನ ಮೇಲೆ ಮಾಜಿ ಪ್ರಿಯಕರನ ಗುಂಡಿನ ದಾಳಿ
ಹಸೆಮಣೆಯಲ್ಲೇ ವಧುವಿನ ಮೇಲೆ ಮಾಜಿ ಪ್ರಿಯಕರನ ಗುಂಡಿನ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಹಸೆಮಣೆಯಲ್ಲೇ ವಧುವಿನ ಮೇಲೆ ಮಾಜಿ ಪ್ರಿಯಕರನ ಗುಂಡಿನ ದಾಳಿ
  • ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಧು ಆರತಿ
  • ಗುಂಡು ಹಾರಿಸಿ ಪರಾರಿಯಾದ ಮಾಜಿ ಪ್ರೇಮಿ ದೀನಬಂಧು
  • ಪೊಲೀಸರಿಂದ ಮುಂದುವರಿದೆ ಶೋಧ ಕಾರ್ಯಾಚರಣೆ
ಬಿಹಾರ: ಇನ್ನೇನು ಮದುವೆಯಾಗಿ ಗಂಡನ ಮನೆ ಸೇರಿ ದಾಂಪತ್ಯ ಜೀವನ ನಡೆಸುವ ಸುಂದರ ಕನಸುಗಳನ್ನು ಕಾಣುತ್ತಿದ್ದ ಆಕೆ ಈಗ ಆಸ್ಪತ್ರೆಯಲ್ಲಿ, ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.
ವರ ವಧುವಿಗೆ ವರಮಾರೆಯನ್ನು ಹಾಕಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಧುವಿನ ಮಾಜಿ ಸಿನಿಮಾದಲ್ಲಿ ವಿಲನ್​ ಎಂಟ್ರಿ ಕೊಟ್ಟು ವಧುವಿನ ಮೇಲೆ ಗುಂಡಿನ (Wedding Firing) ದಾಳಿ ನಡೆಸಿದ ಘಟನೆ ಬಿಹಾರದ, ಬಕ್ಸಾರ್​ ಜಿಲ್ಲೆಯಲ್ಲಿ ನಡೆದಿದೆ.
ಮಾಹಿತಿಗಳ ಪ್ರಕಾರ, ಮಾಜಿ ಪ್ರೀಯಕರ ಬಂದೂಕಿನಿಂದ ಸಿಡಿದ ಗುಂಡು ಪ್ರೀಯತಮೆಯ ಹೊಟ್ಟೆಯನ್ನು ಹೊಕ್ಕಿದ್ದು, ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಈಗ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಈ ಘಟನೆ ಕುರಿತು ಬಕ್ಸಾರ್​ ಠಾಣೆಯಲ್ಲಿ ದೂರನ್ನು ದಾಖಲಿಸಿಲಾಗಿದೆ. ಇದು ಪ್ರೇಮ ನಿವೇದನೆಯನ್ನು ಒಪ್ಪದೇ ಬೇರೊಬ್ಬನನ್ನು ಮದುವೆಯಾಗುತ್ತಿರುವ ಹಿನ್ನಲೆಯಲ್ಲಿ ನಡೆದ ಕೊಲೆ ಯತ್ನದ ಪ್ರಕರಣವಾಗಿದೆ. ಹದಿನೆಂಟು ವರ್ಷದ ವಧು ಆರತಿ ಕುಮಾರಿ ಎನ್ನುವವಳನ್ನು ಆಕೆಯ ಪಕ್ಕದ ಮನೆಯ ದೀನಬಂಧು ಎಂಬಾತ ಪ್ರೀತಿ ಮಾಡುತ್ತಿದ್ದ. ಆದರೆ ಆರತಿ ಕುಮಾರಿ, ದೀನಬಂಧು ಬದಲಿಗೆ ಬೇರೊಬ್ಬನೊಂದಿಗೆ ಮದುವೆಯಾಗಲು ನಿರ್ಧರಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಬಕ್ಸಾರ್​ ವಿಭಾಗದ ಎಸ್ಪಿ ಶುಭಮ್​ ಆರ್ಯ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಕೊಲೆ ಯತ್ನ ಮಾಡಿದ್ದ ದೀನಬಂಧು ಸದ್ಯ ಪರಾರಿಯಾಗಿದ್ದು, ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ಅರೋಪಿ ದೀನಬಂಧು ಒಬ್ಬ ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು ಈ ಮೊದಲು ಅಕ್ರಮ ಸರಾಯಿ ಮಾರಾಟ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿದ್ದ ಎಂದು ಅವರು ತಿಳಿಸಿದ್ದಾರೆ. ಸದ್ಯ ಪೊಲೀಸರು ದೀನಬಂಧುಗಾಗಿ ಹುಡುಕಾಟ ಮುಂದುವರೆಸಿದ್ದು ಶೀಘ್ರದಲ್ಲಿ ಅವನನ್ನು ಬಂಧಿಸುವುದಾಗಿ  ಎಸ್ಪಿ ಶುಭಮ್​ ಆರ್ಯ ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net