ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು 9ನೇ ತರಗತಿ ವಿದ್ಯಾರ್ಥಿಗಳಿಗೆ ತಂದಿದ್ದ ತ್ರಿಭಾಷಾ ನೀತಿಯನ್ನು ಅಣ್ಣಾಮಲೈ ಬಹಿರಂಗವಾಗಿಯೇ ವಿರೋಧಿಸಿದ್ದರು. ಇದು ಪಕ್ಷದ ವರಿಷ್ಠರೊಂದಿಗೆ ಅವರಿಗಿರುವ ಭಿನ್ನಾಭಿಪ್ರಾಯವನ್ನು ಸಾಬೀತುಪಡಿಸಿತ್ತು. ಅಲ್ಲದೆ, ಬಿಜೆಪಿ ಹಿರಿಯ ನಾಯಕರು ಮಾತ್ರ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಅಣ್ಣಾಮಲೈ ಪಕ್ಷದಲ್ಲೇ ಇರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ ಜೂನ್ 3 ರೊಳಗೆ ಅಣ್ಣಾಮಲೈ ಅವರ ದೆಹಲಿ ಭೇಟಿಯ ನಂತರ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ,(ಏಜೆನ್ಸೀಸ್).