ವಿಜಯ್​ಗೆ ಪ್ರಮಾಣವಚನಕ್ಕೆ ಅನುಮತಿ ನಿರಾಕರಣೆ; ತಮಿಳುನಾಡು ರಾಜ್ಯಪಾಲರ ವಿರುದ್ಧ ವಿಸಿಕೆ ಮುಖಸ್ಥ ತೋಲ್ ತಿರುಮಾವಲವನ್ ಕಿಡಿ | Thol Thirumavalavan

ತೋಲ್ ತಿರುಮಾವಲವನ್ ಮತ್ತು ವಿಜಯ್
ತೋಲ್ ತಿರುಮಾವಲವನ್ ಮತ್ತು ವಿಜಯ್
Published on
ಚೆನ್ನೈ: ತಮಿಳುನಾಡಿನಲ್ಲಿ ಯಾವುದೇ ಪಕ್ಷ ಬಹುಮತ ಪಡೆಯದೇ ರಾಜಕೀಯ ಹೈಡ್ರಾಮ ಶುರುವಾಗಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್​​ ಅವರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಅನುಮತಿ ನಿರಾಕರಿಸರುವ ತಮಿಳುನಾಡು ರಾಜ್ಯಪಾಲ ವಿಶ್ವನಾಥ್ ರಾಜೇಂದ್ರ ಅರ್ಲೇಕರ್ ವಿರುದ್ಧ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್, ವಿಸಿಕೆ, ಸಿಪಿಎಂ ಹಾಗೂ ಸಿಪಿಐ ಪಕ್ಷಗಳು ವಾಗ್ದಾಳಿ ನಡೆಸಿವೆ.
ಈ ಕುರಿತು ಮಾತನಾಡಿರುವ ವಿದುತಲೈ ಚಿರುತೈಗಲ್ ಕಚ್ಚಿ ಮುಖ್ಯಸ್ಥ ತೋಲ್ ತಿರುಮಾವಲವನ್, ರಾಜ್ಯದಲ್ಲಿ ಜನರು ಟಿವಿಕೆಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿದ್ದಾರೆಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಬೇಕು. ಅದು ಸಂವಿಧಾನವು ಒದಗಿಸಿದ ಅವಕಾಶ. ವಿಜಯ್ ಹಕ್ಕು ಮಂಡಿಸಿದಾಗಲೂ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಮತ್ತು ಗೊಂದಲಕ್ಕೆ ಅವಕಾಶ ನೀಡುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರು ಟಿವಿಕೆಯನ್ನು ಬೆಂಬಲಿಸುವ ಶಾಸಕರ ಪಟ್ಟಿಯನ್ನು ಕೇಳಲು ಸಾಧ್ಯವಿಲ್ಲ.
ಅವರು, ನಿಮ್ಮನ್ನು ಯಾರು ಬೆಂಬಲಿಸುತ್ತಿದ್ದಾರೆ? 118 ಶಾಸಕರ ಪಟ್ಟಿ ತಂದು ನನಗೆ ಸಾಬೀತುಪಡಿಸಿ, ನಂತರ ಪ್ರಮಾಣವಚನ ಸಮಾರಂಭಕ್ಕೆ ಬನ್ನಿ ಎನ್ನುತ್ತಿದ್ದಾರೆ. ಹೀಗೆ ಹೇಳಲು ಅವರಿಗೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯ್ ಅವರು ತಮ್ಮ ಪಕ್ಷ 108 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚಿಸಲು ಅನುಮತಿ ಕೋರಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ರಾಜ್ಯಪಾಲರು ಬಿಜೆಪಿ ನಾಯಕರಂತೆ ವರ್ತಿಸುತ್ತದ್ದಾರೆ. ಬಿಜೆಪಿ ಕೂಡ ರಾಜ್ಯ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಇದೇ ವೇಳೆ ವಿಜಯ್ ತಮಗೆ ಬೆಂಬಲ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ. ಆದರೆ ನಮ್ಮ ಪಕ್ಷ ಮತ್ತು ನಾವು ಬೆಂಬಲ ನೀಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷದ ತಮಿಳುನಾಡು ಘಟಕವು, ರಾಜ್ಯಪಾಲರು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದೆ. ಮತ್ತು ಪ್ರಮಾಣ ವಚನ ಸ್ವೀಕರಿಸುವ ಮೊದಲು ವಿಜಯ್ ಅವರ ಬಹುಮತವನ್ನು ಸಾಬೀತುಪಡಿಸಲು ಕೇಳುವುದು ಅನುಚಿತ ಎಂದು ಕಿಡಿಕಾರಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net