ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಝೆನ್ಜಿಗಳ ಬಗ್ಗೆ ಕಿಡಿಕಾರಿದ್ದ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಅವರ ರೀಲ್ಸ್ ವಾಕರಿಕೆ ಬರುವಂತೆ ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಸಾಕಷ್ಟು ಟೀಕೆಗೆ, ರಾಜಕೀಯ ಚರ್ಚೆಗೆ ಕಾರಣವಾಗಿದೆ.ಸೌರವ್ ದಾಸ್ ಕಂಗನಾ ಅವರ ಟೀಕೆಗಳನ್ನು ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ಪ್ರತಿಯಾಗಿ ಕಂಗನಾ (Kangana Ranaut) ಸಿಜೆಪಿ ವಕ್ತಾರನನ್ನು ಕೆಲಸವಿಲ್ಲದವನು ಎಂದು ಜರಿದರು.