ಪ್ರವಾಹದ ನೀರಲ್ಲಿ ಸಿಕ್ಕ ಮೀನುಗಳನ್ನು ತಿಂದು ನಿಮಗೆ ವಾಂತಿ, ಅತಿಸಾರ, ತೀವ್ರ ಹೊಟ್ಟೆ ನೋವು, ತಲೆತಿರುಗುವಿಕೆ ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆ ಪಡೆಯಬೇಕು. ಒಂದು ವೇಳೆ ನಿಮ್ಮ ಸುತ್ತಮುತ್ತ ಅಂತಹ ಅಪರಿಚಿತ ಮೀನುಗಳು ಕಂಡುಬಂದರೆ, ಕೂಡಲೇ ಸ್ಥಳೀಯ ಆಡಳಿತಕ್ಕೆ ಅಥವಾ ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿ ಎಂದು ಇಲಾಖಾ ಸುತ್ತೋಲೆ ತಿಳಿಸಿದೆ.