ಹಿಟ್‌ ಆ್ಯಂಡ್‌ ರನ್‌ ಕೇಸ್‌ಗೆ ಟ್ವಿಸ್ಟ್; ಆರೋಪಿ ಬೈಸ್ಲಾ ಪರ ಬೆಂಬಲಿಗರ ರೋಡ್‌ಶೋ | Gurugram Hit and Run Case

ಕಲ್ಯಾಣ್ ಬೈಸ್ಲಾ ಪರ ಕಾರ್ ರ‍್ಯಾಲಿ ಮಾಡಿದ ವಿಡಿಯೋ ವೈರಲ್
ಕಲ್ಯಾಣ್ ಬೈಸ್ಲಾ ಪರ ಕಾರ್ ರ‍್ಯಾಲಿ ಮಾಡಿದ ವಿಡಿಯೋ ವೈರಲ್
Published on: 

ಪ್ರಮುಖ ಮುಖ್ಯಾಂಶಗಳು

  • ಗುರುಗ್ರಾಮ್ ಹಿಟ್‌ ಆ್ಯಂಡ್‌ ರನ್‌ ಕೇಸ್​ನ ಆರೋಪಿ ಪರ ಕಾರ್ ರ‍್ಯಾಲಿ
  • ಫ್ಲೈಓವರ್‌ನಲ್ಲಿ ಹಲವು ಕಾರುಗಳು ಸಾಗುತ್ತಿರುವ ವಿಡಿಯೋ ವೈರಲ್
  • ಬೈಸ್ಲಾ ಪರ ಪಾಲ್ವಾಲ್‌ನಲ್ಲಿ ಮಹಾಪಂಚಾಯತ್ ರ‍್ಯಾಲಿ ಆಯೋನೆ
ಗುರುಗ್ರಾಮ್: ಗೋಲ್ಫ್ ಕೋರ್ಸ್ ರಸ್ತೆಯ ಹಿಟ್‌ ಆ್ಯಂಡ್‌ ರನ್‌ ಪ್ರಕರಣದ ಆರೋಪಿ ಎನ್ನಲಾದ ಕಲ್ಯಾಣ್ ಸಿಂಗ್ ಬೈಸ್ಲಾ ಪರ ಕಾರ್ ರ‍್ಯಾಲಿ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಹಲವು ಕಾರುಗಳು ಒಂದರ ಹಿಂದೆ ಮತ್ತೊಂದು ಸಾಗುತ್ತಿರುವುದು ಕಂಡುಬಂದಿದೆ. ಬೈಸ್ಲಾ ಪರ ಬೆಂಬಲ ವ್ಯಕ್ತಪಡಿಸುವ ಘೋಷಣೆಗಳು ಮತ್ತು ಹಾಡುಗಳು ಕೇಳಿಬರುತ್ತಿರುವುದಾಗಿ ವಿಡಿಯೋ ಹಂಚಿಕೊಂಡವರು ಹೇಳಿಕೊಂಡಿದ್ದಾರೆ.

ಬೈಸ್ಲಾ ಪರ ಮಹಾಪಂಚಾಯತ್

ಕಾರ್ ರ‍್ಯಾಲಿಯ ಬೆನ್ನಲ್ಲೇ ಪಾಲ್ವಾಲ್‌ನ ಕುಶ್ಲಿಪುರದ ಗುಜ್ಜರ್ ಧರ್ಮಶಾಲೆಯಲ್ಲಿ ಬೈಸ್ಲಾ ಪರ ಮಹಾಪಂಚಾಯತ್ ನಡೆದಿರುವುದಾಗಿ ವರದಿಯಾಗಿದೆ. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಆರೋಪಿಯ ಪರ ಬೆಂಬಲಿಗರು ಒಗ್ಗೂಡಿರುವುದು ಚರ್ಚೆಗೆ ಕಾರಣವಾಗಿದೆ.
ಘಟನೆ ಬಗ್ಗೆ ಸಂತ್ರಸ್ತೆಯ ಪ್ರತಿಕ್ರಿಯೆ
ಬೈಸ್ಲಾ ಪರ ಮಹಾಪಂಚಾಯತ್ ಬಗ್ಗೆ ಬೈಕ್ ಸವಾರ್ತಿ ಶಿವಾನಿ ಚೌಹಾಣ್ ಪ್ರತಿಕ್ರಿಯಿಸಿದ್ದಾರೆ. ಪ್ರಕರಣವನ್ನು ಜಾತಿ ಅಥವಾ ಸಮುದಾಯದ ವಿಚಾರವನ್ನಾಗಿ ಮಾಡಬಾರದು. ರಸ್ತೆ ಅಪಘಾತದ ಬಗ್ಗೆ ಗಮನ ಹರಿಸಿ, ಇಂತಹ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ವಿಡಿಯೋ ವೈರಲ್ ಬಳಿಕ ಪೊಲೀಸರ ತನಿಖೆ ಚುರುಕು
ಗೋಲ್ಫ್ ಕೋರ್ಸ್ ರಸ್ತೆಯ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಿಡಿಯೋ ಪರಿಶೀಲನೆ ಬಳಿಕ ಬೈಸ್ಲಾ ವಿರುದ್ಧ ಕೊಲೆ ಯತ್ನದ ಆರೋಪ ಸೇರಿಸಲಾಗಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 15ರಂದು ರಾಜಸ್ಥಾನದಲ್ಲಿ ಬೈಸ್ಲಾ ಹಾಗೂ ಅವರ ಸಂಬಂಧಿ ಲವ್ನಿಶ್ ಬಂಧನವಾಗಿದ್ದು, ಇಬ್ಬರನ್ನೂ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು.

ಆರೋಪ ಏನು?

ಪೊಲೀಸ್ ಮೂಲಗಳ ಪ್ರಕಾರ, ಘಟನೆಗೂ ಮುನ್ನ ಬೈಸ್ಲಾ, ಅವರ ಸಂಬಂಧಿ ಹಾಗೂ ಇಬ್ಬರು ಸ್ನೇಹಿತರು ಪಾರ್ಟಿ ಮುಗಿಸಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಬೈಕ್‌ಗೆ ಉದ್ದೇಶಪೂರ್ವಕವಾಗಿ ಕಾರು ಡಿಕ್ಕಿ ಹೊಡೆದಿಲ್ಲ, ಅದು ಆಕಸ್ಮಿಕ ಎಂದು ಬೈಸ್ಲಾ ಆರೋಪವನ್ನು ನಿರಾಕರಿಸಿದ್ದಾರೆ.

ಮುಂದುವರಿದ ತನಿಖೆ

ಪ್ರಕರಣದ ತನಿಖೆ ಮುಂದುವರಿದಿದ್ದು, ಕಾರಿನಲ್ಲಿದ್ದವರ ಪಾತ್ರದ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ನಡುವೆ ಬೈಸ್ಲಾ ಪರ ಕಾರ್ ರ‍್ಯಾಲಿ ಹಾಗೂ ಮಹಾಪಂಚಾಯತ್ ವಿಡಿಯೋಗಳು ವೈರಲ್ ಆಗಿದ್ದು, ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ.(ಏಜೆನ್ಸೀಸ್​)