ಜಿಲ್ಲೆಯ ಉಳಿದ ಪ್ರಮುಖ ಕ್ಷೇತ್ರಗಳಾದ ಕುಂಭಕೋಣಂ, ಪಾಪನಾಶಂ, ತಿರುವೈಯಾರು, ತಂಜಾವೂರು, ಪಟ್ಟುಕೊಟ್ಟೈ ಮತ್ತು ಪೆರವುರಾಣಿ ಕ್ಷೇತ್ರಗಳಲ್ಲಿ ಕಳೆದ ಬಾರಿ ಡಿಎಂಕೆ ಪರವಾಗಿ ಏಕಪಕ್ಷೀಯ ತೀರ್ಪು ಬಂದಿತ್ತು. ಇಂತಹ ಪ್ರಬಲ ದ್ರಾವಿಡ ಭದ್ರಕೋಟೆಯಲ್ಲೇ ವಿಜಯ್ ಈಗ ತಮ್ಮ ಪ್ರಣಾಳಿಕೆ ಮಂಡಿಸಿರುವುದು, ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳ ಮತಬ್ಯಾಂಕ್ಗೆ ಲಗ್ಗೆ ಹಾಕುವ ಸ್ಪಷ್ಟ ಮುನ್ಸೂಚನೆಯಾಗಿದೆ(ಏಜೆನ್ಸೀಸ್).