ರಷ್ಯಾ ತೈಲ ಖರೀದಿಗೆ ಟ್ರಂಪ್ ಬ್ರೇಕ್? ಭಾರತಕ್ಕೆ 100% ಸುಂಕದ ತೂಗುಕತ್ತಿ! Trump's tariffs on India

ರಷ್ಯಾ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ಅಮೆರಿಕದ ಹೆಚ್ಚುವರಿ ಸುಂಕದ ಬೆದರಿಕೆ
ರಷ್ಯಾ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ಅಮೆರಿಕದ ಹೆಚ್ಚುವರಿ ಸುಂಕದ ಬೆದರಿಕೆ
Published on: 

ಪ್ರಮುಖ ಮುಖ್ಯಾಂಶಗಳು

  • ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕ?
  • ಟ್ರಂಪ್‌ಗೆ ಶೇ.100ರವರೆಗೆ ಟ್ಯಾರಿಫ್ ಹೇರುವ ಮಸೂದೆಗೆ ಅನುಮೋದನೆ
  • ರಷ್ಯಾ ತೈಲದ ಪ್ರಮುಖ ಖರೀದಿದಾರರ ಪಟ್ಟಿಯಲ್ಲಿ ಭಾರತವೂ ಒಂದು
India-Russia Oil: ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ಹಾಕುವ ಅಮೆರಿಕದ ಕ್ರಮ ಇದೀಗ ಭಾರತಕ್ಕೂ ಹೊಸ ತಲೆನೋವು ತಂದಿದೆ. ಇದಕ್ಕೆ ಸಂಬಂಧಿಸಿದ ಹೊಸ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ 262–159 ಮತಗಳಿಂದ ಅನುಮೋದನೆ ಸಿಕ್ಕಿದೆ.
ಇನ್ನು, ಈ ‘ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧಗಳ ಕಾಯ್ದೆ–2026’ ಜಾರಿಗೆ ಬಂದರೆ, ರಷ್ಯಾದ ತೈಲ ಮತ್ತು ಅನಿಲ ಖರೀದಿಸುವ ಪ್ರಮುಖ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವ ಅಧಿಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಿಗಲಿದೆ. ಇದರ ಪರಿಣಾಮವಾಗಿ, ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾ ತೈಲದ ಪ್ರಮುಖ ಖರೀದಿದಾರ ದೇಶಗಳು ಅಮೆರಿಕದ ಹೆಚ್ಚುವರಿ ಸುಂಕದ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ.

ಭಾರತಕ್ಕೆ ತಕ್ಷಣವೇ ಶೇ.100ರಷ್ಟು ಸುಂಕ ಬೀಳುತ್ತಾ?

ಆದ್ರೆ, ಮಸೂದೆಗೆ ಅನುಮೋದನೆ ಸಿಕ್ಕಿದೆ ಅನ್ನೋ ಕಾರಣಕ್ಕೆ ಭಾರತಕ್ಕೆ ತಕ್ಷಣವೇ ಶೇ.100ರಷ್ಟು ಸುಂಕ ಬೀಳುತ್ತೆ ಅಂತಲ್ಲ. ಈ ಅಧಿಕಾರವನ್ನು ಟ್ರಂಪ್ ಬಳಸುತ್ತಾರಾ, ಬಳಸಿದ್ರೆ ಎಷ್ಟು ಪ್ರಮಾಣದ ಟ್ಯಾರಿಫ್ ವಿಧಿಸುತ್ತಾರೆ ಅನ್ನೋದು ಮುಂದಿನ ಬೆಳವಣಿಗೆಗಳ ಮೇಲೆ ನಿರ್ಧಾರವಾಗಲಿದೆ.
ಇಂಧನ ಭದ್ರತೆಯೇ ಪ್ರಮುಖ ಆದ್ಯತೆ ಎಂದ ಭಾರತ
ಈ ಬೆಳವಣಿಗೆಯ ಬೆನ್ನಲ್ಲೇ ಭಾರತ ತನ್ನ ಇಂಧನ ಭದ್ರತೆಯೇ ಪ್ರಮುಖ ಆದ್ಯತೆ ಎಂದು ಸ್ಪಷ್ಟಪಡಿಸಿದೆ. ರಷ್ಯಾ ಮಾತ್ರವಲ್ಲದೆ, ವಿವಿಧ ದೇಶಗಳಿಂದ ತೈಲ ಖರೀದಿಸುವ ಮೂಲಕ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇನ್ನು, ಇದೇ ವೇಳೆ ಅಮೆರಿಕದ ಈ ಕ್ರಮ ಭಾರತ–ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. (ಏಜೆನ್ಸೀಸ್)