ಒಂದು ವೇಳೆ ಈ ಗಡುವಿನೊಳಗೆ ಇರಾನ್ ಒಪ್ಪದಿದ್ದರೆ, ಕೇವಲ 4 ಗಂಟೆಗಳ ಅವಧಿಯಲ್ಲಿ ಇರಾನ್‌ನ ಪ್ರತಿಯೊಂದು ವಿದ್ಯುತ್ ಸ್ಥಾವರ ಮತ್ತು ಪ್ರಮುಖ ಸೇತುವೆಗಳನ್ನು ಬಾಂಬ್ ಹಾಕಿ ಧ್ವಂಸಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಇಡೀ ದೇಶವನ್ನೇ ನಿಷ್ಕ್ರಿಯಗೊಳಿಸಬಹುದು, ಆ ರಾತ್ರಿ ನಾಳೆಯೇ ಆಗಿರಬಹುದು ಎಂಬ ಟ್ರಂಪ್ ಮಾತುಗಳು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.