ರಾಹುಲ್ ಮತ್ತು ಪ್ರಿಯಾಂಕಾ ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬಂದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ. ವಂದೇ ಮಾತರಂ ಚರ್ಚೆಗೆ ಮುನ್ನ, ರಾಹುಲ್ ಗಾಂಧಿ ಮಾಧ್ಯಮಗಳಿಗೆ ಪ್ರಿಯಾಂಕಾ ಅವರ ಭಾಷಣವನ್ನು ಕೇಳಿ ಎಂದು ಹೇಳಿದ್ದರು. ಅಕ್ಕ ಪ್ರಿಯಾಂಕಾರ ಬಿಜೆಪಿಯ ವಿರುದ್ಧ ಟೀಕೆಗಳನ್ನು ರಾಹುಲ್ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚೆಗೆ ರಾಹುಲ್ರ ವಿದೇಶ ಪ್ರವಾಸದ ಸುತ್ತಲಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ, ಪ್ರಧಾನಿ ಮೋದಿ ತಮ್ಮ ಕೆಲಸದ ಸಮಯದ ಅರ್ಧದಷ್ಟು ಸಮಯವನ್ನು ದೇಶದ ಹೊರಗೆ ಕಳೆಯುತ್ತಾರೆ, ವಿರೋಧ ಪಕ್ಷದ ನಾಯಕ ಪ್ರಯಾಣಿಸುವ ಬಗ್ಗೆ ಅವರು ಏಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.