ಅನಂತ್​ನಾಗ್​ನಲ್ಲಿ ಉಗ್ರರ ಅಟ್ಟಹಾಸ: ಅಮರನಾಥ್​ ಯಾತ್ರೆ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ; ಒಬ್ಬ ಪೊಲೀಸ್​ ಹುತಾತ್ಮ! Terror Attack in Anantnag

ಅಮರನಾಥ ಯಾತ್ರೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರರ ಗುಂಡಿನ ದಾಳಿ
ಅಮರನಾಥ ಯಾತ್ರೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರರ ಗುಂಡಿನ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಮತ್ತೆ ತಲೆಎತ್ತಿದ ಭಯೋತ್ಪಾದನೆ
  • ಅಮರನಾಥ ಯಾತ್ರೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರರ ಗುಂಡಿನ ದಾಳಿ
  • ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮ; ಕಣಿವೆ ರಾಜ್ಯದಲ್ಲಿ ಭದ್ರತೆ ತೀವ್ರ
ಅನಂತ್​ನಾಗ್​: ಬುಧವಾರ (ಜು.22) ಜಮ್ಮು-ಕಾಶ್ಮೀರದ ಅನಂತ್​ನಾಗ್​ನಲ್ಲಿ ಪೊಲೀಸರ ಮೇಲೆ ಉಗ್ರದಾಳಿ (Terror Attack in Anantnag) ನಡೆದಿದ್ದು, ಒಬ್ಬ ಪೊಲೀಸ್​ ಸಿಬ್ಬಂದಿ ಹುತಾತ್ಮನಾಗಿದ್ದಾನೆಂದು ವರದಿಯಾಗಿದೆ.
ಈ ಘಟನೆಯು ಮಧ್ಯಾಹ್ನ 12.30 ರ ಸಮಯದಲ್ಲಿ ಅನಂತ್​​ನಾಗ್​ನಲ್ಲಿರುವ ಲಾಲ್​ಚೌಕ್​ ಬಳಿ ನಡೆದಿದ್ದು, ಅಮರ್​ನಾಥ್​ ಯಾತ್ರೆಯ ರಕ್ಷಣೆಗೆ ನಿಂತಿದ್ದ ಪೊಲೀಸ್​ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಹುತಾತ್ಮನಾದ ಪೊಲೀಸ್​ ಸಿಬ್ಬಂದಿಯನ್ನು 35 ವರ್ಷದ ಆಶಿಕ್ ಹುಸೇನ್ ಖುರೇಷಿ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ನಡೆದ ಕೂಡಲೇ, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ ಆಸ್ಪತ್ರೆ ತಲುಪುವ ಮೊದಲೆ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕೃತ್ಯ ಮಾಡಿದ್ದು ನಾವೇ!

ಅನಂತ್​ನಾಗ್​​ನಲ್ಲಿ ನಡೆದಿರುವ ಈ ದಾಳಿಯ ಜವಾಬ್ದಾರಿಯನ್ನು ಭಯೋತ್ಪಾದನಾ ಸಂಘಟನೆ ಲಷ್ಕರ್​-ಎ-ತೊಯ್ಬಾ ತೆಗೆದುಕೊಂಡಿದೆ. ಸದ್ಯ ಘಟನಾ ಸ್ಥಳದಲ್ಲಿ ಸೇನಾ ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ಶಂಕಿತ ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದೆ ಎಂದು ತಿಳಿದು ಬಂದಿದೆ.
ಕಳೆದ ನಾಲ್ಕು ದಿನದಿಂದ ಜಮ್ಮು-ಕಾಶ್ಮೀರದಲ್ಲಿ ಹವಾಮಾನ ವೈಪರಿತ್ಯ ಉಂಟಾದ ಹಿನ್ನಲೆ ಅಮರನಾಥ್​ ಯಾತ್ರೆಯನ್ನು ನಿಲ್ಲಿಸಲಾಗಿದೆ. ಹೀಗಾಗಿ ರಕ್ಷಣೆಗಾಗಿ ನಿಯೋಜನೆಯಾಗಿದ್ದ ಸೈನಿಕರು ತಮ್ಮ ಕ್ಯಾಂಪ್​ ಸೇರಿದ್ದ ಹಿನ್ನಲೆ ಈ ಘಟನೆ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಬಾರಿಯ ಅಮರನಾಥ್​ ಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ನೀಡಲು ಹೆಚ್ಚು ಕಡೆಮೆ 80 ಸಾವಿರ ಭದ್ರತಾ ಸಿಬ್ಬಂದಿಗಳನ್ನು ಕೇಂದ್ರ ಸರ್ಕಾರ ನಿಯೋಜನೆ ಮಾಡಿದೆ. ಆದರೆ ಪರಿಸರ ವೈಪರಿತ್ಯದ ಕಾರಣ ತಾತ್ಕಾಲಿಕವಾಗಿ ಈ ಅಮರನಾಥ್​ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಆಡಳಿತ ಆದೇಶವನ್ನು ಹೊರಡಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net