ಕುಟುಂಬದಲ್ಲಿನ 'ಯಾದವಿ' ಕಲಹದ ನಡುವೆ ಪುತ್ರ ತೇಜಸ್ವಿ ಬೆಂಬಲಕ್ಕೆ ನಿಂತ ಲಾಲು! | Lalu Yadav

 Lalu Yadav | ಲಾಲು ಪ್ರಸಾದ ಯಾದವ್​ ಮತ್ತು ಪುತ್ರ ತೇಜಸ್ವಿ ಯಾದವ್​ (PTI)
Lalu Yadav | ಲಾಲು ಪ್ರಸಾದ ಯಾದವ್​ ಮತ್ತು ಪುತ್ರ ತೇಜಸ್ವಿ ಯಾದವ್​ (PTI)
Published on
ಪಟನಾ: ಇತ್ತೀಚಿನ ಚುನಾವಣೆಯಲ್ಲಿನ ವೈಫಲ್ಯ ಮತ್ತು ಕುಟುಂಬದಲ್ಲಿನ ಕಲಹದಿಂದ ತತ್ತರಿಸಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಆಘಾತದಿಂದ ಹೊರ ಬಂದು ಪಕ್ಷಕ್ಕೆ ಹೊಸ ಚೈತನ್ಯ ನೀಡಲು ನಿರ್ಧರಿಸಿದ್ದು, ಸೋಮವಾರ (ನ.17) ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್, ಪುತ್ರ ತೇಜಸ್ವಿ ಯಾದವ್​ಗೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಪಟನಾದಲ್ಲಿ ನೂತನ ಆರ್‌ಜೆಡಿ ಶಾಸಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಲಾಲು ಪ್ರಸಾದ್, ತೇಜಸ್ವಿ ಪಕ್ಷಕ್ಕಾಗಿ ತುಂಬಾ ಶ್ರಮಪಟ್ಟಿದ್ದು, ಮುಂದಿನ ದಿನಗಳಲ್ಲಿಯೂ ಅದೇ ರೀತಿಯಾಗಿ ಮುನ್ನಡೆಸುವುದನ್ನು ಮುಂದುವರಿಸುತ್ತಾರೆ ಎಂದು ಸಾರ್ವಜನಿಕವಾಗಿಯೇ ಘೋಷಿಸಿದರು. ಕೌಟುಂಬಿಕ ಕಲಹದ ನಡುವೆ ತೇಜಸ್ವಿ ನಾಯಕತ್ವದ ಮೇಲೆ ನಂಬಿಕೆ ಇರುವುದಾಗಿ ತಿಳಿಸಿರುವುದು ಇತ್ತ ಪುತ್ರಿ ರೋಹಿಣಿ ಆಚಾರ್ಯ ಯಾವ ರೀತಿಯಾಗಿ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.

ಲಾಲು ಪ್ರಸಾದ ಯಾದವ್​ ಹೇಳಿದ್ದೇನು..?

ತೇಜಸ್ವಿ ನೆ ಪಾರ್ಟಿ ಕೋ ಆಗೇ ಬಧಯಾ ಹೈ. ಆಗೇ ಭೀ ವಹೀ ಕಾಮ್ ಕರೇಂಗೆ (ತೇಜಸ್ವಿ ಪಕ್ಷವನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ. ಅವರು ಅದನ್ನು ಮುಂದುವರಿಸುತ್ತಾರೆ)" ಎಂದು ಲಾಲು ಪ್ರಸಾದ ಶಾಸಕರಿಗೆ ಹೇಳಿದ್ದಾರೆ. ಇಂಡಿಯಾ ಒಕ್ಕೂಟದ ಸೋಲಿನ ಬಳಿಕ ಈ ಆತ್ಮವಿಶ್ವಾಸ ಪಕ್ಷವನ್ನು ಮುನ್ನಡೆಸಲು ಸ್ಫೂರ್ತಿ ನೀಡಬಹುದು.

ಫಲಿತಾಂಶ ಆಘಾತಕಾರಿ ಎಂದ ತೇಜಸ್ವಿ ಯಾದವ್​

ಇದೇ ಸಭೆಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಆರ್‌ಜೆಡಿ ಇಷ್ಟೊಂದು ಕಳಪೆ ಪ್ರದರ್ಶನ ನೀಡಬಹುದು ಎನ್ನುವುದನ್ನು ನಿರೀಕ್ಷಿಸಿರಲಿಲ್ಲ, ರಾಜ್ಯದ ಪ್ರತಿಯೊಂದು ಕ್ಷೇತ್ರಗಳ ವರದಿಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದರು. ಇವಿಎಂ ಮತಗಳು ಮತ್ತು ನಿಮ್ಮ ಲೆಕ್ಕಾಚಾರದ ನಡುವೆ ಏನಾದರು ವ್ಯತ್ಯಾಸವಿದೆಯೇ? ಅದಕ್ಕೆ ತಕ್ಕಂತೆ ಯಾವುದಾದರು ದಾಖಲೆಗಳಿವೆಯೇ ಎಂದು ನಾಯಕರಿಂದ ತೇಜಸ್ವಿ ಸ್ಪಷ್ಟನೆ ಕೇಳಿದ್ದಾರೆಂದು ವರದಿಯಾಗಿದೆ.

ಆರ್‌ಜೆಡಿ 25 ಸ್ಥಾನಗಳಿಗೆ ಕುಸಿತ

ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ, 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಎನ್‌ಡಿಎ, ಮಹಾಘಟಬಂಧನ್​ಗೆ ಮರ್ಮಾಘಾತ ನೀಡಿದೆ. ಆರ್‌ಜೆಡಿ ಸ್ಪರ್ಧಿಸಿದ್ದ 143 ಸ್ಥಾನಗಳಲ್ಲಿ ಕೇವಲ 25 ಸ್ಥಾನಗಳನ್ನು ಮಾತ್ರ ಜಯ ಸಾಧಿಸಲು ಯಶಸ್ವಿಯಾಗಿದ್ದು, ಇದು ಪಕ್ಷದೊಳಗೆ ಆತ್ಮಾವಲೋಕನ ಮಾಡಿಕೊಳ್ಳಲು ಸೂಕ್ತ ಸಮಯವಾಗಿದೆ.

ಲಾಲು ಪುತ್ರಿ ರೋಹಿಣಿಯ ಆಚಾರ್ಯ ಗಂಭೀರ ಆರೋಪ

ಲಾಲು ಪ್ರಸಾದ್​ರ ದ್ವಿತೀಯ ಸುಪುತ್ರಿ ರೋಹಿಣಿ ಆಚಾರ್ಯ, ತಮ್ಮ ಸಹೋದರ ತೇಜಸ್ವಿ ಮತ್ತು ಅವರ ಆಪ್ತ ಸಹಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ತಂದೆಗೆ ಮೂತ್ರಪಿಂಡ ದಾನ ಮಾಡಿದ ನನ್ನ್ನನು ಅವರು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಹಾರ ವಿಧಾನಸಭೆಯ ವಿಪಕ್ಷ ನಾಯಕರಾಗಿ ತೇಜಸ್ವಿ ಆಯ್ಕೆ

ಬಿಹಾರ ವಿಧಾನಸಭೆಯ ನೂತನ ವಿರೋಧ ಪಕ್ಷದ ನಾಯಕರಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಸೋಮವಾರ (ನ.17) ಆಯ್ಕೆಯಾಗಿದ್ದಾರೆ. ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೇಜಸ್ವಿ ಯಾದವ್​, ಮತ ಎಣಿಕೆಯ ಆರಂಭಿಕ ಸುತ್ತಿನಿಂದ ಹಿನ್ನಡೆ ಅನುಭವಿಸುತ್ತಲೇ ಸಾಗಿದ್ದರು, ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ವಿರುದ್ಧ 14,532 ಮತಗಳ ಗೆಲುವು ಸಾಧಿಸಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net