ಪೊಲೀಸರ ಸೋಗಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ದೆಹಲಿಯಲ್ಲಿ 10 ದಿನದಲ್ಲಿ 4 ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
  • ದಕ್ಷಿಣ ದೆಹಲಿಯ ಕಾಳಿಕಾ ದೇವಸ್ಥಾನದ ಬಳಿಯ ಪಾರ್ಕ್​ನಲ್ಲಿ ಅಪ್ರಾಪ್ತೆ ಮೇಲೆ ರೇಪ್.

  • ಪೊಲೀಸ್ ಸೋಗಿನಲ್ಲಿ ಬಂದ ಮೂವರಂದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.

  • ಪೊಲೀಸರ ಮೇಲೆ ಗುಂಡು ಹಾರಿಸಿದ ಆಸಿಫ್ ಎಂಬ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್.

ನವ ದೆಹಲಿ: ಬಿಹಾರದಲ್ಲಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಘಾತಕಾರಿ ಘಟನೆ ಮಾಸುವ ಮುನ್ನವೇ ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ದುಷ್ಕರ್ಮಿಗಳು ಪೊಲೀಸರಂತೆ ಪೋಸ್ಟ್​ ಕೊಟ್ಟು 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ  ರಾಷ್ಟ್ರ ರಾಜಧಾನಿ ದಹಲಿಯಲ್ಲಿ ಕಾಳಿಕಾ ದೇವಸ್ಥಾನದ ಬಳಿ ಇರುವ ಪಾರ್ಕ್​ವೊಂದರಲ್ಲಿ ಸೋಮವಾರ ರಾತ್ರಿ ನಡೆದಿದೆ.

ಸಾಮೂಹಿಕ ಅತ್ಯಾಚಾರ

17 ವರ್ಷದ ಬಾಲಕಿ ದೇವಸ್ಥಾನದ ಬಳಿಯ ಪಾರ್ಕ್​ಗೆ 7:30ಕ್ಕೆ ತೆರಳಿದ್ದಳು. ಆಕೆ ತನ್ನ ಸ್ನೇಹಿತನೊಂದಿಗೆ ಸುತ್ತಾಡುತ್ತಿರುವಾಗ ಅದೇ ಸ್ಥಳಕ್ಕೆ ಬಂದ 25 ರಿಂದ 30 ವರ್ಷ ವಯಸ್ಸಿನ ಮೂವರು ಆರೋಪಿಗಳು. ನಾವು ಪೊಲೀಸರು ಎಂದು ಪರಿಚಯ ಮಾಡಿಕೊಂಡಿದ್ದಾರೆ. 

ಚಾಕು, ಗನ್ ತೋರಿಸಿ ಬೆದರರಿಕೆ

ಆನಂತರ ಇಬ್ಬರಿಗೂ ಬೆದರಿಕೆ ಹಾಕಿದ್ದಾರೆ. ಒಬ್ಬ ಆರೋಪಿ ಬಂದೂಕು ಮತ್ತು ಚಾಕುವಿನಿಂದ ಬೆದರಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಉಳಿದಿಬ್ಬರು ಆರೋಪಿಗಳು ಸಹ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೆಹಲಿ ಪೊಲೀಸರು  ಮಾಹಿತಿ ಹಂಚಿಕೊಂಡಿದ್ದಾರೆ.

ಕಾಳಿಕಾ ದೇವಸ್ಥಾನ ಮತ್ತು ಇಸ್ಕಾನ್ ದೇವಸ್ಥಾನವನ್ನು ಸಂಪರ್ಕಿಸುವ ಉದ್ಯಾನವನದಲ್ಲಿ  ನಡೆದ ಘಟನೆ ಬಗ್ಗೆ ಅಪ್ರಾಪ್ತ ಯುವತಿ ಪೊಲೀಸರಿಗೆ 8;45ಕ್ಕೆ ಕರೆ ಮಾಡಿ ದೂರು ನೀಡಿದ್ದಾಳೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಹೇಳಿಕೆಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.

ಕಾಲಿಗೆ ಗುಂಡೇಟು

ಅಮರ್ ಕಾಲೋನಿಯ ಡಿಎಂ ಆಫೀಸ್ ರಸ್ತೆ ಬಳಿ ಒಬ್ಬ ಆರೋಪಿಯ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಲವಾದ ಬಲೆ ಬೀಸಿದ್ದರು. ಆತನನ್ನು ತಡೆದಾಗ ಆಸಿಫ್ ಎಂಬ ಆರೋಪಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಶರಣಾಗುವಂತೆ ಎಚ್ಚರಿಕೆ ನೀಡಿದರೂ ಸಹ ಕೇಳದೆ ಇದ್ದಾಗ, ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಪೊಲೀಸರು ನಡೆಸಿದ ಆತ್ಮರಕ್ಷಣೆಯ ಗುಂಡೇಟಿನಲ್ಲಿ ಆರೋಪಿಯ ಬಲಗಾಲಿಗೆ ಗಾಯವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೇವಲ 10 ದಿನಗಳಲ್ಲಿ 4 ಅಪ್ರಾಪ್ತೆಯರ ಮೇಲೆ ಅತ್ಯಾಚಾರ 

  • ಸೆಪ್ಟೆಂಬರ್ 13: ವಾಯುವ್ಯ ದೆಹಲಿಯ ಸ್ವರೂಪ್ ನಗರದಲ್ಲಿ 17 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ.

  • ಸೆಪ್ಟೆಂಬರ್ 16: ಉತ್ತರ ದೆಹಲಿಯ ಸಾದರ್ ಬಜಾರ್ ಪ್ರದೇಶದಲ್ಲಿ ಅಂಗಡಿಯೊಂದರಲ್ಲಿ ಕೈಕಾಲುಗಳನ್ನು ಕಟ್ಟಿ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ.

  • ಸೆಪ್ಟೆಂಬರ್ 21: ಮಧ್ಯ ದೆಹಲಿಯ ಕಿಶನ್‌ಗಂಜ್ ಪ್ರದೇಶದಲ್ಲಿ 34 ವರ್ಷದ ವ್ಯಕ್ತಿಯಿಂದ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ.

  • ಕಾಳಿಕಾ ಪಾರ್ಕ್‌ನಲ್ಲಿ ನಡೆದ ಈ ಘಟನೆಯು ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net