ಕಾಲೇಜಿನ ಮಹಿಳಾ ಉಪನ್ಯಾಸಕಿಯೊಬ್ಬರು ತರಗತಿಯಲ್ಲಿ ಎಲ್ಲರ ಮುಂದೆ ತರುಣ್‌ನನ್ನು ಅಣಕಿಸಿ, 435 ಅಂಕಗಳೊಂದಿಗೆ ಮೊದಲ ರ‍್ಯಾಂಕ್ ಪಡೆದ ಇನ್ನೊಬ್ಬ ವಿದ್ಯಾರ್ಥಿಗೆ ಹೋಲಿಸಿದರು, ಹೀಯಾಳಿಸಿದರು. ಮತ್ತೊಬ್ಬರಿಗೆ ತನ್ನನ್ನು ಯಾಕೆ ಹೋಲಿಸೋದು, ಹೀಯಾಳಿಸೋದು ಯಾಕೆ ಎಂದು ಆತ ಪ್ರಶ್ನೆ ಮಾಡಿದಾಗ. ನೀನೇನು ಮಂತ್ರಿ ಮಗನಾ ಎಂದು ಎಲ್ಲರ ಮುಂದೆ ಕಪಾಳಕ್ಕೆ ಹೊಡೆದಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಬಾಲಕ ಎರಡು ದಿನಗಳ ಕಾಲ ಕಾಲೇಜಿಗೆ ಹೋಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.