ತಮಿಳುನಾಡು ಚುನಾವಣೆ : ಇಂದಿಗೆ ಬಹಿರಂಗ ಪ್ರಚಾರ ಅಂತ್ಯ; ನಾಳೆ ಮನೆ ಮನೆ ಪ್ರಚಾರ; ಏ. 23ರಂದು ಮತದಾನ | Tamil Nadu elections

ಸಿಎಂ ಎಂ.ಕೆ.ಸ್ಟಾಲಿನ್, ಇಪಿಎಸ್​, ದಳಪತಿ ವಿಜಯ್
ಸಿಎಂ ಎಂ.ಕೆ.ಸ್ಟಾಲಿನ್, ಇಪಿಎಸ್​, ದಳಪತಿ ವಿಜಯ್
Published on
ಚೆನ್ನೈ: ತಮಿಳುನಾಡು ಸಾರ್ವತ್ರಿಕ ವಿಧಾನಸಭೆ ಚುನಾವಣೆ-2026ರ(Tamil Nadu elections) ಬಹಿರಂಗ ಪ್ರಚಾರ ಇಂದು(ಏ. 21) ಅಂತ್ಯಗೊಂಡಿದ್ದು, ನಾಳೆ ಒಂದು ದಿನ ಮನೆ-ಮನೆ ಪ್ರಚಾರ ನಡೆಯಲಿದ್ದು, ನಾಡಿದ್ದು(ಏ. 23) ಒಂದೇ ಹಂತದಲ್ಲಿ 234 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಚುನಾವಣೆಯು ಡಿಎಂಕೆ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಮತ್ತು ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟದ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಇದೇ ಮೊದಲ ಬಾರಿಗೆ ತಮಿಳು ಸೂಪರ್ ಸ್ಟಾರ್ ಟಿವಿಕೆ ಪಕ್ಷ ಕಟ್ಟಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. 234 ವಿಧಾನಸಭಾ ಕ್ಷೇತ್ರಗಳಲ್ಲಿ 4,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೇ 4ರಂದು ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.
ಇದೇ ವೇಳೆ ಇಂದು ತಮ್ಮ ಸರ್ಕಾರದ ಮೊದಲ ಐದು ವರ್ಷಗಳ ಅವಧಿಯಲ್ಲಿನ ಸಾಧನೆಗಳನ್ನು ಎತ್ತಿ ತೋರಿಸುವ ವಿಡಿಯೋವನ್ನು ಬಿಡುಗಡೆ ಮಾಡಿರುವ ಡಿಎಂಕೆ ಮುಖ್ಯಸ್ಥ ಮತ್ತು ಸಿಎಂ ಎಂ.ಕೆ.ಸ್ಟಾಲಿನ್, ತಮ್ಮ ಪಕ್ಷಕ್ಕೆ ಎರಡನೇ ಅವಧಿಗೆ ಅಧಿಕಾರ ನೀಡುವಂತೆ ಮತದಾರರನ್ನು ಒತ್ತಾಯಿಸಿದ್ದಾರೆ.
ಎಂ.ಕರುಣಾಧಿನಿಗಿಂತ ಸ್ಟಾಲಿನ್ ಡೇಂಜರ್ ಎಂಬ ಮಾತಿಗೆ ಪ್ರತಿಕ್ರಿಯಿಸಿರುವ ಅವರು, ತಮಿಳುನಾಡಿಗೆ ದ್ರೋಹ ಮಾಡಲು ಅಥವಾ ಅದರ ಅಭಿವೃದ್ಧಿಯನ್ನು ತಡೆಯಲು ಬಯಸುವವರಿಗೆ ನಾನು ಬೆದರಿಕೆಯಾಗಿದ್ದೇನೆ ಎಂಬುದನ್ನು ಆ ಮಾತು ನೆನಪಿಸುತ್ತದೆ ಎಂದು ಹೇಳಿದ್ದಾರೆ.
ಡಿಎಂಕೆ ಹಿಂದೂ ವಿರೋಧಿ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅವರು, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸುಳ್ಳು ನಿರೂಪಣೆಗಳನ್ನು ಹರಡುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 7,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ದೇವಾಲಯದ ಆಸ್ತಿಗಳನ್ನು ವಾಪಸ್ ಪಡೆಯಲಾಗಿದೆ. ಮತ್ತು ಸಾವಿರಾರು ದೇವಾಲಯಗಳನ್ನು ಜೀರ್ಣೋದ್ಧಾರ ನಡೆದಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net