ಇನ್ನು, 2007ರ ಎಜಿಎಂಯುಟಿ ಕೇಡರ್‌ನ ಅಧಿಕಾರಿಯಾಗಿರುವ ನೂಪುರ್ ಪ್ರಸಾದ್, ಸಿಬಿಐನಲ್ಲಿ ತಮ್ಮ ಸೇವಾವಧಿ ಪೂರ್ಣಗೊಳಿಸಿದ ಬಳಿಕ ದೆಹಲಿಗೆ ಮರಳಿದ್ದಾರೆ. ಸದ್ಯ ಅವರು ಆರ್ಥಿಕ ಅಪರಾಧಗಳ ವಿಭಾಗದ (EOW) ಜಂಟಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ತನಿಖೆ, ಅಪರಾಧ ತಡೆ, ಸಾರ್ವಜನಿಕ ಸೇವೆ, ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಅವರಿಗೆ ಈ ಗೌರವ ಸಲ್ಲಿಸಲಾಗಿದೆ.