ಫಾರೂಕ್ ಅಬ್ದುಲ್ಲಾ ಮೇಲೆ ನಡೆದಿರುವ ದಾಳಿ ಭದ್ರತಾ ಲೋಪದ ಬಗ್ಗೆ ನೇರವಾಗಿ ಪ್ರಶ್ನೆ ಮಾಡುತ್ತಿವೆ. ಈ ಮದುವೆಗೆ ದೇಶದ ಪ್ರಮುಖ ವ್ಯಕ್ತಿಗಳು ಆಗಮಿಸುತ್ತಿದ್ದರೂ ಸಮರ್ಪಕ ಭದ್ರತೆಯನ್ನು ನೀಡಲು ವಿಫಲವಾದ ಕುರಿತು ಚರ್ಚೆ ನಡೆಯುತ್ತಿದೆ. ಇದು ಖಂಡಿತವಾಗಿ ಭದ್ರತಾ ಲೋಪ. ಈ ಮದುವೆಯಲ್ಲಿ ಅನೇಕ ದೊಡ್ಡ ವ್ಯಕ್ತಿಗಳು ಹಾಜರಿದ್ದರು, ಆದರೆ ಪೊಲೀಸರು ಇರಲಿಲ್ಲ, ನಾನು ಅಲ್ಲಾಹನ ದಯೆಯಿಂದ ಬದುಕುಳಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.