ಪೂರ್ವಾನುಮತಿ ಪಡೆಯದೆಯೇ ಕೋರ್ಟ್ ಕಲಾಪಗಳ ವಿಡಿಯೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಪಬ್ಲಿಶ್ ಮಾಡುವುದು ಹಾಗೂ ಅದರಿಂದ ಹಣ ಗಳಿಸುವುದನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಿಷೇಧಿಸಲು ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಕೋರ್ಟ್ ವಿಡಿಯೋಗಳ ಪ್ರಸಾರವನ್ನು ಬೆನ್ನತ್ತಿರುವ ಕಂಟ್ರೋಲ್ ತಪ್ಪಿದ ಭೂತ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜೋಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು.