ಪ್ರಸ್ತುತ ಲೋಕಸಭಾ ಸ್ಥಾನಗಳ ಆಧಾರದಲ್ಲೇ ಮಹಿಳಾ ಮೀಸಲಾತಿಗೆ ಬೆಂಬಲ; ಡಿಲಿಮಿಟೇಷನ್​ ಬಗ್ಗೆ ಸ್ಪಷ್ಟತೆ ಬೇಕು: ಡಿಎಂಕೆ | DMK

ಡಿಎಂಕೆ ನಾಯಕ ತಿರುಚಿ ಶಿವ
ಡಿಎಂಕೆ ನಾಯಕ ತಿರುಚಿ ಶಿವ
Published on
ನವದೆಹಲಿ: ಪ್ರಸ್ತುತ ಲೋಕಸಭೆಯಲ್ಲಿರುವ ಸ್ಥಾನಗಳ ಬಲದಲ್ಲೇ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿಯನ್ನು ಜಾರಿಗೆ ತರಲು ಸ್ಪಷ್ಟ ಸೂತ್ರವನ್ನು ರೂಪಿಸುವಂತೆ ಡಿಎಂಕೆ(DMK) ಭಾನುವಾರ(ಜು. 19) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ನಾಳೆಯಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಕರೆದಿದ್ದ ಸಾಂಪ್ರದಾಯಿಕ ಸರ್ವಪಕ್ಷ ಸಭೆಯಲ್ಲಿ ಡಿಎಂಕೆ ನಾಯಕ ತಿರುಚಿ ಶಿವ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಸಭೆ ಬಳಿಕ ಮಾತನಾಡಿರುವ ಅವರು, ಲೋಕಸಭೆಯಲ್ಲಿ ಪ್ರಸ್ತುತ ಸಂಖ್ಯಾಬಲದ ಆಧಾರದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮಂಡನೆಯಾದ್ರೆ ಅದಕ್ಕೆ ಡಿಎಂಕೆ ಬೆಂಬಲ ನೀಡಲಿದೆ. ಆದರೆ ಕ್ಷೇತ್ರ ಪುನರ್ವಿಂಗಡಣೆ ವಿಷಯದ ಕುರಿತು ನಮಗೆ ಹೆಚ್ಚಿನ ಸ್ಪಷ್ಟತೆ ಬೇಕು ಎಂದು ಹೇಳಿದ್ದಾರೆ.
ಗಡಿ ವಿಂಗಡಣೆಯು ದಕ್ಷಿಣ ರಾಜ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು. ಇದು ದಕ್ಷಿಣ ರಾಜ್ಯಗಳ ಮೇಲೆ ಪರಿಣಾಮ ಬೀರಿದರೆ, ಅದನ್ನು 25 ವರ್ಷಗಳ ಕಾಲ ಸ್ಥಗಿತಗೊಳಿಸಬೇಕು ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net