47 ಸ್ಥಾನಗಳಿರುವ ಕಾವೇರಿ ಡೆಲ್ಟಾ ಪ್ರದೇಶದಲ್ಲಿಯೂ ಎನ್‌ಡಿಎ 22-25 ಸ್ಥಾನಗಳೊಂದಿಗೆ ಮೇಲುಗೈ ಸಾಧಿಸಬಹುದು. ಆದರೆ, ಚೆನ್ನೈ ಪ್ರದೇಶದಲ್ಲಿ ಮಾತ್ರ ಡಿಎಂಕೆ ಮೈತ್ರಿಕೂಟವು 16-19 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಲಕ್ಷಣಗಳಿವೆ. ಇಲ್ಲಿ ಟಿವಿಕೆ ಕೂಡ 4-7 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಭಾವ ಬೀರಲಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಎಐಎಡಿಎಂಕೆ, ಬಿಜೆಪಿ, ಪಿಎಂಕೆ, ಎಎಂಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಒಂದಾಗಿವೆ. ಇದಕ್ಕೆ ಪ್ರತಿಯಾಗಿ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್, ವಿಸಿಕೆ, ಕಮ್ಯುನಿಸ್ಟ್ ಪಕ್ಷಗಳು ಹಾಗೂ ಐಯುಎಂಎಲ್ ಭದ್ರವಾಗಿ ನೆಲೆಯೂರಿವೆ.