ಇನ್ನು, ವೈರಲ್ ಆಗಿರುವ ಪೋಸ್ಟ್‌ಗಳ ವಿಡಿಯೋದಲ್ಲಿ, ಸೈನಿಕರೊಬ್ಬರು 8 ತಿಂಗಳ ಕಾಲ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಬಂದಿದ್ದರು. ಕುಟುಂಬದೊಂದಿಗೆ 2 ತಿಂಗಳ ರಜೆ ಕಳೆದ ಬಳಿಕ ಮತ್ತೆ ಗಡಿ ಕಾಯಲು ತೆರಳಬೇಕಾಯಿತು. ಸೈನಿಕ ಮನೆ ಬಿಟ್ಟು ಹೊರಡುವ ವೇಳೆ ಅವರ ಪುಟ್ಟ ಮಕ್ಕಳು ತಂದೆಯನ್ನು ಹೋಗುವುದಕ್ಕೆ ಬಿಡದೇ, ‘ಅಪ್ಪ ಹೋಗಬೇಡಿ’ ಎಂದು ಹಿಂದೆ ಓಡುವ ದೃಶ್ಯ ನೋಡುಗರ ಕಣ್ಣಲ್ಲೂ ನೀರು ತರಿಸುವಂತಿದೆ.