ಹಸುವಿನ ಚರ್ಮದ ಬ್ಯಾಗ್​ ಹಿಡಿದು ಕರುವಿಗೆ ಆಹಾರ ನೀಡಿದ ಗಾಯಕಿ: ರಿಹಾನ್ನಾ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು! Rihanna Cow Skin Bag

ಹಸುವಿನ ಚರ್ಮದ ಬ್ಯಾಗ್​ ಹಿಡಿದು ಆಕಳಿಗೆ ಆಹಾರ ನೀಡಿದ ಗಾಯಕಿ
ಹಸುವಿನ ಚರ್ಮದ ಬ್ಯಾಗ್​ ಹಿಡಿದು ಆಕಳಿಗೆ ಆಹಾರ ನೀಡಿದ ಗಾಯಕಿ
Published on

ಪ್ರಮುಖ ಮುಖ್ಯಾಂಶಗಳು

  • ಭಾರತಕ್ಕೆ ಬಂದ ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾ
  • ಮುಖೇಶ್​ ಅಂಬಾನಿ ಮನೆಯಲ್ಲಿ ಅತಿಥಿ ಸತ್ಕಾರ
  • ಹಸುವಿನ ಚರ್ಮದ ಬ್ಯಾಗ್​ ಹಿಡಿದು ಆಕಳಿಗೆ ಆಹಾರ ನೀಡಿದ ಗಾಯಕಿ
  • ಸೋಷಿಯಲ್​ ಮೀಡಿಯಾನಲ್ಲಿ ಭಾರಿ ವಿವಾದಕ್ಕೆ ಕಾರಣವಾದ ಪೋಸ್ಟ್​
ಮುಂಬೈ: ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾ ಭಾರತಕ್ಕೆ ಬಂದಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಮುಂಬೈಗೆ ತಮ್ಮ ನೂತನ ಮಳಿಗೆಯ ಉದ್ಘಾಘನೆಗೆ ಬಂದಿದ್ದ ರಿಹಾನ್ನಾ ಮುಖೇಶ್​ ಅಂಬಾನಿ ಮನೆಗೆ ಬೇಟಿ ನೀಡಿದ್ದರು.

ದನದ ಚರ್ಮದ ಬ್ಯಾಗ್​ ಹಿಡಿದು ಹಸುವಿನೊಂದಿಗೆ ಫೋಸ್​!

ಮುಖೇಶ್​ ಅಂಬಾನಿ ಅವರ ಅಟೆಂಲಿನಾಗೆ ತೆರಳಿದ್ದಾಗ, ಅಲಿದ್ದ ಹಸುವಿನ ಮರಿ (ಕರು) ಗೆ ಹುಲ್ಲು ತಿನ್ನಿಸುತ್ತಾ, ರಿಹಾನ್ನಾ ಫೋಟೊಗೆ ಫೋಸ್​ ನೀಡಿದ್ದಾರೆ. ಆದರೆ ಈ ಫೋಟೊಗೆ ಫೋಸ್ ನೀಡುವಾಗ ರಿಹಾನ್ನಾ (Rihanna Cow Skin Bag) ಳ ಕೈಲಿದ್ದ ದುಬಾರಿ ಬ್ಯಾಗೊಂದು ಎಲ್ಲರ ಕಣ್ಣಿಗೆ ಬಿದ್ದಿದ್ದು, ಈ ಬ್ಯಾಗ್​ನ್ನು ಸಹ ದನದ ಚರ್ಮದಿಂದ ತಯಾರಿಸಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿ ದಾಡುತ್ತಿದೆ.
ದೇವರಿಗೆ ಆರತಿ ಬೆಳಗಿದ ಗಾಯಕಿ!
ಮನೆಗೆ ಆಗಮಿಸಿದ ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾರನ್ನು ಮುಖೇಶ್​ ಅಂಬಾನಿ ಪುತ್ರಿ ಇಶಾ ಅಂಬಾನಿ, ಸೊಸೆಯಂದಿರಾದ ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್​ ಹಾಗೂ ಮಗ ಅನಂತ್​ ಅಂಬಾನಿ ಸ್ವಾಗತಿಸಿದರು.
ಮನೆಗೆ ಅತಿಥಿಯಾಗಿ ಆಗಮಿಸಿದ ರಿಹಾನ್ನಾಗಾಗಿ ವಿಶೇಷ ಪೂಜೆಯನ್ನು ಏರ್ಪಡಿಸಿದ್ದ ಅಂಬಾನಿ ಪರಿವಾರದ ಜೊತೆಗೆ ಎಲ್ಲಾ ರೀತಿಯ ಕಾರ್ಯಕ್ರಮದಲ್ಲಿ ರಿಹಾನ್ನಾ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ.
ನಂತರ ದೇವರಿಗೆ ಆತರಿ ಬೆಳಗಿದ ರಿಹಾನ್ನಾ, ನಂತರ ಹೂನಿನ ಹೋಳಿ (ಫೂಲ್​ ಕಿ ಹೋಲಿ) ಯಲ್ಲಿ ಭಾಗವಹಿಸಿ, ಅಂಬಾನಿ ಮನೆಯವರೊಂದಿಗೆ ಹೂವುಗಳನ್ನು ಪರಸ್ಪರ ಎರಚಿಕೊಳ್ಳುತ್ತಾ ನೃತ್ಯ ಮಾಡಿದ್ದಾರೆ. ಈ ವಿಡಿಯೋಗಳು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ನೆಟ್ಟಿಗರು ಏನಂತಾರೆ?

ರಿಹಾನ್ನಾಳ ಈ ಫೋಟೊ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣೆಗೆ ಸುಣ್ಣ ಎಂಬ ನಮ್ಮ ಹಿರಿಯರ ಮಾತು ಸತ್ಯ ಎಂದು ಒಬ್ಬರು ಹೇಳಿದ್ದಾರೆ. ಇವೆಲ್ಲಾ ಬರೀ ಪಬ್ಲಿಸಿಟಿ ಸ್ಟಂಟ್​ ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪವಿತ್ರ ಪ್ರಾಣಿ ಹಸುವಿನ ಚರ್ಮದ ಬ್ಯಾಗ್​ ಹಿಡಿದಿರುವ ಈ ಗಾಯಕಿಯ ಯಾವ ಹಾಡನ್ನು ಇನ್ಮುಂದೆ ಕೇಳುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.

ಯಾರು ಈ ರಿಹಾನ್ನಾ?

ರಿಹಾನ್ನಾ ಪೂರ್ಣ ಹೆಸರು ರಾಬಿನ್ ರಿಹಾನ್ನಾ ಫೆಂಟಿ​, ಇವರು 1988ರಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಬಾರ್ಬಡೋಸ್​ನಲ್ಲಿ ಜನಿಸಿದರು.ಇವರು ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕಿ, ಗೀತರಚನೆಗಾರ್ತಿ, ನಟಿ ಮತ್ತು ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದಾರೆ. ಇವರು ಫೆಂಟಿ ಬ್ಯೂಟಿ (Fenty Beauty) ಎಂಬ ಪ್ರಸಿದ್ಧ ಸೌಂದರ್ಯವರ್ಧಕ ಬ್ರ್ಯಾಂಡ್ ಮತ್ತು ಸ್ಯಾವೇಜ್ ಎಕ್ಸ್ ಫೆಂಟಿ (Savage X Fenty) ಎಂಬ ಒಳ ಉಡುಪುಗಳ ಬ್ರ್ಯಾಂಡ್‌ನ ಮಾಲಕಿಯಾಗಿದ್ದಾರೆ.
ಇವರು ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಸಂಗೀತಗಾರ್ತಿಯರಲ್ಲಿ ಒಬ್ಬರಾಗಿದ್ದು, ಇಲ್ಲಿಯವರೆಗೆ 9 ಗ್ರಾಮಿ ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಬಾರ್ಬಡೋಸ್ ಸರ್ಕಾರವು ಇವರನ್ನು ರಾಷ್ಟ್ರೀಯ ನಾಯಕಿ ಎಂದು ಗೌರವಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net