ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಬಿಷ್ಣೋಯ್ ಅವರ ಆ ಒಂದು ಓವರ್ ಪಂದ್ಯದ ಗತಿಯನ್ನು ಹೇಗೆ ಬದಲಾಯಿಸಿತು ಮತ್ತು ಪಂದ್ಯವನ್ನು ತಮ್ಮ ಕೈಯಿಂದ ಹೇಗೆ ಕಸಿದುಕೊಂಡಿತು ಎಂಬುದನ್ನು ಉಲ್ಲೇಖಿಸಿದ್ದಾರೆ. ಪಂದ್ಯ ಎಲ್ಲಿ ಕೈತಪ್ಪಿತು ಎಂಬುದು ನಮ್ಮೆಲ್ಲರಿಗೂ ಗೊತ್ತು ಎಂದು ನಾನು ಭಾವಿಸುತ್ತೇನೆ, ಆದರೆ ನಾನು ಯಾವುದೇ ನಿರ್ದಿಷ್ಟ ಆಟಗಾರನನ್ನು ಬೆರಳು ಮಾಡಿ ತೋರಿಸಲು ಬಯಸುವುದಿಲ್ಲ. 15ನೇ ಓವರ್‌ನವರೆಗೆ ನಾವು ಇದ್ದ ರೀತಿಯನ್ನು ನೋಡಿದರೆ, ಉತ್ತಮ ಸ್ಥಿತಿಯಲ್ಲೇ ಇದ್ದೆವು ಎಂದು ನನಗೆ ಅನಿಸುತ್ತದೆ. ಆದರೆ ಇದ್ದಕ್ಕಿದ್ದಂತೆ ಪಂದ್ಯದ ಗತಿ ಅವರ ಕಡೆಗೆ ಬದಲಾಯಿತು ಮತ್ತು ಅಲ್ಲಿಂದ ಮುಂದೆ ಗುರಿ ತಲುಪಲು ನೆರವಾಯಿತು ಎಂದು ಶ್ರೇಯಸ್ ತಿಳಿಸಿದರು.