ಆಪರೇಷನ್ ಟೈಗರ್ ವಿಚಾರ: ಪಕ್ಷದಿಂದ ಬೇರ್ಪಟ್ಟ ಯಾವುದೇ ಬಣಕ್ಕೆ ಮಾನ್ಯತೆ ನಿರಾಕರಿಸಿ; ಲೋಕಸಭೆ ಸ್ಪೀಕರ್​​ಗೆ ಪತ್ರ ಬರೆದ ಶಿವಸೇನಾ(ಯುಬಿಟಿ) | Shiv Sena (UBT)

ಉದ್ದವ್ ಠಾಕ್ರೆ
ಉದ್ದವ್ ಠಾಕ್ರೆ
Published on
ನವದೆಹಲಿ: ಮಹಾರಾಷ್ಟ್ರದಲ್ಲಿ ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಟೈಗೆರ್ ಬಹುತೇಕ ಯಶಸ್ವಿಯಾಗಿದ್ದು, ಉದ್ಧವ್ ಠಾಕ್ರೆ ಶಿವಸೇನೆಯ ಆರು ಸಂಸದರು ಶಿಂಧೆ ಬಣ ಸೇರುವ ಸಾಧ್ಯತೆಯಿದ್ದು, ಈ ನಡುವೆ ಬುಧವಾರ (ಜೂ. 17) ಪಕ್ಷದಿಂದ ಬೇರ್ಪಟ್ಟ ಯಾವುದೇ ಬಣಕ್ಕೆ ಮಾನ್ಯತೆ ನಿರಾಕರಿಸಿ ಎಂದು ಲೋಕಸಭೆ ಸ್ಪೀಕರ್​​ಗೆ ಶಿವಸೇನಾ(ಯುಬಿಟಿ) (Shiv Sena (UBT)) ಪತ್ರ ಬರೆದಿದೆ.
ಲೋಕಸಭೆ ಸ್ಪೀಕರ್​ಗೆ ಪತ್ರ ಬರೆದಿರುವ ಶಿವಸೇನಾ ಯುಬಿಟಿ ಪಕ್ಷದ ಸಂಸದೀಯ ನಾಯಕ ಅರವಿಂದ್ ಸಾವಂತ್, ಪಕ್ಷವನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಯಾವುದೇ ಬಣ ಅಥವಾ ಬೇರ್ಪಟ್ಟ ಗುಂಪಿಗೆ ಯಾವುದೇ ಮಾನ್ಯತೆ, ಸ್ಥಾನಮಾನ, ಸವಲತ್ತು ಅಥವಾ ಸೌಲಭ್ಯವನ್ನು ನೀಡದಂತೆ ಒತ್ತಾಯಿಸಿದ್ದಾರೆ.
ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ತನ್ನ ಅಧಿಕೃತ ನಾಯಕ ಮತ್ತು ಸಚೇತಕನ ಮೂಲಕ ಸದನದಲ್ಲಿ ಪ್ರತಿನಿಧಿಸುವ ಏಕೈಕ ರಾಜಕೀಯ ಪಕ್ಷವೆಂದು ಗುರುತಿಸಲ್ಪಟ್ಟಿದೆ. ಒಂದು ವೇಳೆ ಯಾವುದೇ ಬಣವು ಪ್ರತ್ಯೇಕತೆಗೆ ಮನವಿ ಮಾಡಿದ್ರೆ, ಅದನ್ನು ನೀವು ಸ್ವೀಕರಿಸಿದ್ರೆ ನಮ್ಮ ಅಭಿಪ್ರಾಯವನ್ನು ಸಲ್ಲಿಸಲು ಅವಕಾಶ ನೀಡದೇ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ವಿನಂತಿಸಿದ್ದಾರೆ.
ಹತ್ತನೇ ವೇಳಾಪಟ್ಟಿಯ ನಿಬಂಧನೆಗಳನ್ನು ಅನ್ವಯಿಸುವ ಮತ್ತು ಮೇಲೆ ಉಲ್ಲೇಖಿಸಲಾದ ಸಾಂವಿಧಾನಿಕ ತತ್ವಗಳಿಗೆ ಹೊಂದಿಕೆಯಾಗದ ಯಾವುದೇ ನಡವಳಿಕೆಗೆ ಸಂಬಂಧಿಸಿದಂತೆ ಅಗತ್ಯವಾಗಬಹುದಾದ ಪರಿಹಾರಗಳನ್ನು ಅನುಸರಿಸುವ ಹಕ್ಕನ್ನು ಒಳಗೊಂಡಂತೆ ಕಾನೂನಿನಲ್ಲಿ ಲಭ್ಯವಿರುವ ಎಲ್ಲಾ ಹಕ್ಕುಗಳನ್ನು ಪಕ್ಷವು ಕಾಯ್ದಿರಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿಂಧೆ ಬಣಕ್ಕೆ ಆರು ಸಂಸದರು ಜಂಪ್?

ಶಿವಸೇನೆ (ಯುಬಿಟಿ)ಯ 9 ಲೋಕಸಭಾ ಸಂಸದರಲ್ಲಿ 6 ಮಂದಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಲಿದ್ದಾರೆ ಎಂದು ವರದಿಯಾಗಿದ್ದು, ಆರು ಸಂಸದರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಅವರೆಲ್ಲರೂ ತಡರಾತ್ರಿಯೇ ದೆಹಲಿಯತ್ತ ತೆರಳಿದ್ದಾರೆ.
ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಬಣದ ಆರು ಸಂಸದರು ಇಂದು ಮುಂಜಾನೆ ಶ್ರೀಕಾಂತ್ ಶಿಂಧೆ ಅವರ ದೆಹಲಿ ನಿವಾಸದಲ್ಲಿ ಸಭೆ ಸೇರಲಿದ್ದಾರೆ. ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಹೆಸರು ಸೇರುವ ಸಾಧ್ಯತೆ ಇದೆ. ಹೆಚ್ಚುವರಿಯಾಗಿ ರಾಜಭಾವು ವಾಜೆ ಕೂಡ ಆರು ಸಂಸದರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಹರಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net