ಟ್ರಂಪ್​-ಮಮ್ದಾನಿ ಭೇಟಿಗೆ ತರೂರ್​ ಶ್ಲಾಘನೆ; ಈ ಸಂದೇಶವನ್ನು ರಾಹುಲ್​ ಅರ್ಥ ಮಾಡಿಕೊಳ್ಳುತ್ತಾರೆಯೇ ಎಂದು ಬಿಜೆಪಿ ವ್ಯಂಗ್ಯ | Shashi Tharoor

Shashi Tharoor | ಸಂಸದ ಶಶಿ ತರೂರ್
Shashi Tharoor | ಸಂಸದ ಶಶಿ ತರೂರ್
Published on
ದೆಹಲಿ: ಚುನಾವಣೆಯ ಸಮಯದಲ್ಲಿ ಪರಸ್ಪರ ಟೀಕಾ ಪ್ರಹಾರ ನಡೆಸುತ್ತಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕ್‌ನ ಹೊಸದಾಗಿ ಆಯ್ಕೆಯಾದ ಮೇಯರ್ ಜೋಹ್ರಾನ್ ಮಮ್ದಾನಿಯನ್ನು ಶ್ವೇತಭವನದಲ್ಲಿ ಭೇಟಿಯಾಗುವುದನ್ನು ಪ್ರಜಾಪ್ರಭುತ್ವದ ಮನೋಭಾವವನ್ನು ಎತ್ತಿಹಿಡಿಯಲಾಗಿದೆ ಎಂಬ ಸಂಸದ ಶಶಿ ತರೂರ್ ಹೇಳಿಕೆಯನ್ನು ಬಿಜೆಪಿ ಬೆಂಬಲಿಸಿದೆ.
ಇಬ್ಬರು ಅಮೇರಿಕನ್ ನಾಯಕರ ವಿಡಿಯೋವನ್ನು ಹಂಚಿಕೊಂಡಿರುವ ತರೂರ್​, ಭಾರತದಲ್ಲಿಯೂ ಇದೇ ರೀತಿಯ ಸಹಕಾರವನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ತರೂರ್​, ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು. ಯಾವುದೇ ವಾಕ್ಚಾತುರ್ಯದ ನಿರ್ಬಂಧಗಳಿಲ್ಲದೆ, ಚುನಾವಣೆಯಲ್ಲಿ ನಿಮ್ಮ ದೃಷ್ಟಿಕೋನಕ್ಕಾಗಿ ಉತ್ಸಾಹದಿಂದ ಹೋರಾಡಿ. ಆದರೆ ಅದು ಮುಗಿದ ಬಳಿಕ, ನೀವಿಬ್ಬರೂ ಸೇವೆ ಸಲ್ಲಿಸಲು ಪ್ರತಿಜ್ಞೆ ಮಾಡಿರುವ ರಾಷ್ಟ್ರದ ಸಾಮಾನ್ಯ ಹಿತಾಸಕ್ತಿಗಳಲ್ಲಿ ಪರಸ್ಪರ ಸಹಕರಿಸಲು ಕಲಿಯಿರಿ. ಭಾರತದಲ್ಲಿ ಇದನ್ನು ನೋಡಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ತರೂರ್​ ಹಂಚಿಕೊಂಡಿರುವ ವೀಡಿಯೊದಲ್ಲಿ, ವರದಿಗಾರನೊಬ್ಬ ಮಮ್ದಾನಿಯನ್ನು ಟ್ರಂಪ್ ಇನ್ನೂ "ಫ್ಯಾಸಿಸ್ಟ್" ಎಂದು ಭಾವಿಸುತ್ತೀರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಮಮ್ದಾನಿ ಉತ್ತರಿಸುವ ಮೊದಲೇ ಟ್ರಂಪ್ ಮಧ್ಯಪ್ರವೇಶಿಸಿ, ತಮ್ಮನ್ನು ಫ್ಯಾಸಿಸ್ಟ್ ಎಂದು ಕರೆಯುವುದರಲ್ಲಿ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.

ತರೂರ್ ಹೇಳಿಕೆಗೆ ಬಿಜೆಪಿ ಬೆಂಬಲ..

ಸಂಸದ ಶಶಿ ತರೂರ್​​ರ ಹೇಳಿಕೆಯನ್ನು ಬಿಜೆಪಿ ಹೊಗಳಿದ್ದು, ಕಾಂಗ್ರೆಸ್ ನಾಯಕರನ್ನು ಟೀಕಿಸಿದೆ. ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್​ ಸಂಸದರು, ತಮ್ಮ ಪಕ್ಷದ ನಾಯಕರಿಗೆ ಗಾಂಧಿ ಕುಟುಂಬದ ಬದಲು ದೇಶವನ್ನು ಮೊದಲು ಇಡುವಂತೆ ನೆನಪಿಸಿದ್ದಾರೆ ಎಂದು ಹೇಳಿದ್ದಾರೆ.
ಮತ್ತೊಮ್ಮೆ ತರೂರ್ ಕಾಂಗ್ರೆಸ್ ಪಕ್ಷಕ್ಕೆ ಕುಟುಂಬದ ಹಿತಾಸಕ್ತಿಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುಖ್ಯವೆಂದು ನೆನಪಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನಾದರು ಕೆಲವರು ಸೋತವರಂತೆ ವರ್ತಿಸುವ ಬದಲು ಪ್ರಜಾಸತ್ತಾತ್ಮಕವಾಗಿ ಸೇವೆ ಸಲ್ಲಿಸಬೇಕು ಮತ್ತು ವರ್ತಿಸಬೇಕು ಎಂದು ಪೂನಾವಾಲಾ ಸಂದೇಶದಲ್ಲಿ ತಿಳಿಸಿದ್ದಾರೆ.
ಚುನಾವಣೆಗಳಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷ ಕೆಟ್ಟದಾಗಿ ಮಾತನಾಡುತ್ತದೆ. ಚುನಾವಣೆ ಮುಗಿದ ನಂತರ ಪ್ರತಿಸ್ಪರ್ಧಿ ಪಕ್ಷಗಳು ರಾಷ್ಟ್ರೀಯ ಉದ್ದೇಶಕ್ಕಾಗಿ ಒಟ್ಟಾಗಿ ಸೇವೆ ಸಲ್ಲಿಸಬೇಕು ಎಂದು ತರೂರ್ ಅವರಿಗೆಲ್ಲಾ ನೆನಪಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಈ ಸಂದೇಶವನ್ನು ಅರ್ಥಮಾಡಿಕೊಳ್ಳುತ್ತಾರೆಯೇ!, ರಾಜತಾಂತ್ರಿಕರಾಗಿ ಬದಲಾದ ರಾಜಕಾರಣಿಯ ವಿರುದ್ಧ ಕಾಂಗ್ರೆಸ್ ಮತ್ತೊಂದು ಫತ್ವಾ ಹೊರಡಿಸಿದರು ಅಚ್ಚರಿಪಡಬೇಕಿಲ್ಲ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net