ಕಾಂಗ್ರೆಸ್‌ಗೆ 'ಕೈ' ಕೊಟ್ಟು ಕೆಂಪು ಬಾವುಟ ಹಿಡಿತಾರಾ ತರೂರ್ ? ಏನಿದು ದುಬೈ ಚರ್ಚೆಯ ರಹಸ್ಯ..? | Shashi Tharoor

Shashi Tharoor | ಸಂಸದ ಶಶಿ ತರೂರ್
Shashi Tharoor | ಸಂಸದ ಶಶಿ ತರೂರ್
Published on
Shashi Tharoor: ಕೋಝಿಕೋಡ್‌ನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ಅಲ್ಲಿಂದ ನೇರವಾಗಿ ದುಬೈಗೆ ತೆರಳಿ ಸಿಪಿಐ(ಎಂ) ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ರಾಹುಲ್ ಗಾಂಧಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ತರೂರ್​ಗೆ ಅವಮಾನವಾಗಿದೆ ಎನ್ನಲಾಗಿದ್ದು, ಅದರಿಂದಾಗಿಯೇ ಸಂಸದರು ಕಾಂಗ್ರೆಸ್​ನ ಪ್ರಮುಖ ಸಭೆಯಿಂದ ದೂರುಳಿದಿದ್ದರು ಎಂದು ತಿಳಿದುಬಂದಿದೆ.

ದುಬೈ ಭೇಟಿಯ ಬಗ್ಗೆ ತರೂರ್​ ಹೇಳಿದ್ದೇನು..?

ಈ ವಿಷಯವಾಗಿ ಮಾಧ್ಯಮಗಳು ಭಾನುವಾರ ತರೂರ್​​ರನ್ನು ಸಂಪರ್ಕಿಸಿದ್ದು, ವಿದೇಶದಲ್ಲಿದ್ದಾಗ ಅಂತಹ ವಿಷಯಗಳನ್ನು ಚರ್ಚಿಸುವುದು ಸೂಕ್ತವಲ್ಲ ಎನ್ನುವ ಮೂಲಕ ಊಹಾಪೋಹಗಳಿಗೆ ಇನ್ನಷ್ಟು ಜೀವ ತುಂಬಿದರು.

ಅಸಮಾಧನಕ್ಕೆ ಕಾರಣವೇನು..?

ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದು, ಭಾಷಣದ ಸಂದರ್ಭದಲ್ಲಿ ತರೂರ್​ರ ಕೊಡುಗೆಗಳನ್ನು ಕಡೆಗಣಿಸಿದ್ದಾರೆ ಎಂಬ ವರದಿಯಾಗಿದೆ. ಶಶಿ ತರೂರ್ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಡುವೆ ಕಳೆದ ಕೆಲವು ತಿಂಗಳುಗಳಿಂದ ಶೀತಲ ಸಮರ ನಡೆಯುತ್ತಿದೆ. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ವೇದಿಕೆಯ ಮೇಲಿದ್ದ ಎಲ್ಲಾ ನಾಯಕರ ಹೆಸರನ್ನು ಪ್ರಸ್ತಾಪಿಸಿ, ತರೂರ್ ಹೆಸರನ್ನು ಕೈಬಿಟ್ಟಿದ್ದರು ಎಂಬುದು ದೊಡ್ಡ ವಿವಾದವಾಗಿತ್ತು.
ರಾಜ್ಯ ನಾಯಕರು ಮತ್ತು ಹೈಕಮಾಂಡ್​​ನ ವರಿಷ್ಠರು ಸಂಪರ್ಕಿಸಲು ಪ್ರಯತ್ನಿಸಿದರೂ, ತರೂರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಶನಿವಾರ ಕೋಝಿಕ್ಕೋಡ್‌ನಲ್ಲಿ ನಡೆಯಲಿರುವ ಕೇರಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಎಲ್‌ಡಿಎಫ್ ನಾಯಕರು ಹೇಳಿದ್ದೇನು..?

ಎಲ್‌ಡಿಎಫ್ ಸಂಚಾಲಕ ಟಿ.ಪಿ. ರಾಮಕೃಷ್ಣನ್ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದು, ತರೂರ್ ಜೊತೆಗಿನ ಮಾತುಕತೆಯ ಸುದ್ದಿಗಳನ್ನು ನಿರಾಕರಿಸುತ್ತಾ, ಅವರು ಎಡಪಂಥೀಯ ಸಿದ್ಧಾಂತವನ್ನು ಒಪ್ಪಿಕೊಂಡು ಬರುವುದಾದರೆ ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳುವ ಮೂಲಕ ಪರೋಕ್ಷ ಆಮಂತ್ರಣ ನೀಡಿದ್ದಾರೆ.

ಮುಂದಿನ ನಡೆ ಏನು?

ಶಶಿ ತರೂರ್ ಸಿಪಿಐ(ಎಂ) ಸೇರ್ಪಡೆಗೊಂಡರೆ ಅದು ಯುಡಿಎಫ್ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡಲಿದೆ. ತರೂರ್​​ಗೆ ಜಾಗತಿಕ ಇಮೇಜ್ ಮತ್ತು ಯುವಕರ ಬೆಂಬಲ ಇರುವುದರಿಂದ ಇದನ್ನು ಬಳಸಿಕೊಳ್ಳಲು ಸಿಪಿಐ ತುದಿಗಾಲಿನಲ್ಲಿ ನಿಂತಿದೆ.
ಜನವರಿ 27 ರಂದು ತಿರುವನಂತಪುರಂನಲ್ಲಿ ಕಾಂಗ್ರೆಸ್ ಸಮಿತಿ ಸಭೆ ನಡೆಯಲಿದ್ದು, ಈ ಸಭೆಗೆ ತರೂರ್ ಹಾಜರಾಗುತ್ತಾರೋ ಇಲ್ಲವೋ ಎಂಬುದರ ಮೇಲೆ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net