ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಒಪ್ಪಿಕೊಂಡಿದ್ರಾ ಶಶಿ ತರೂರ್!; ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದೇನು?..Women's Reservation Bill 2026

Women's Reservation Bill
Women's Reservation Bill
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು ಕಾಂಗ್ರೆಸ್​ ವಿರುದ್ಧ ಕಿರಣ್​ ರಿಜಿಜು ಕಿಡಿ
  • ಕಾಂಗ್ರೆಸ್​​ ಮಹಿಳಾ ವಿರೋಧಿ ಎಂದು ಶಶಿ ತರೂರ್​​ ಈ ಅರ್ಥದಲ್ಲಿ ಹೇಳಿದ್ರು ಎಂದು ಬಹಿರಂಗ ಪಡಿಸಿದ ರಿಜಿಜು
  • ರಾಜಕೀಯ ಚರ್ಚೆಗೆ ಕಾರಣವಾದ ಕಿರಣ್​ ರಿಜಿಜು ಮತ್ತು ಶಶಿ ತರೂರ್​ ನಡುವಿನ ಮಾತುಕತೆ
ನವದೆಹಲಿ: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ(Women's Reservation Bill 2026) ಬಹುಮತ ಸಿಗದೆ ಸೋಲು ಕಂಡ ಬೆನ್ನಲ್ಲೇ  ಕಾಂಗ್ರೆಸ್​ ಮತ್ತು ಆಡಳಿತ ರೂಢ ಬಿಜೆಪಿ ಸರ್ಕಾರದ ನಾಯಕರ ವಾಗ್ಯುದ್ಧ ತಾರಕ್ಕೇರಿದೆ. ಈ ಹಿಂದೆ ಶಶಿ ತರೂರ್​ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಕೇಂದ್ರ ಸಚಿವ ಕಿರಣ್ ರಿಜಿಜು( Kiren Rijiju) ಸಂದರ್ಶನವೊಂದರಲ್ಲಿ ಮಾತನಾಡಿರುವುದು ಸದ್ಯ ರಾಜಕೀಯ ಚರ್ಚೆಗೆ ಇನ್ನಷ್ಟು ಪುಷ್ಠಿ ಕೊಟ್ಟಂತಾಗಿದೆ. 
ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿಯಾಗಿರಬಹುದು, ಆದರೆ ನನ್ನನ್ನು ಯಾರೂ ಮಹಿಳಾ ವಿರೋಧಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಈ ಹಿಂದೆ ಸಂಸದ ಶಶಿ ತರೂರ್​ ಅವರು ಹೇಳಿದ್ದರು ಎಂದು   ಕೇಂದ್ರ ಸಚಿವ ಕಿರಣ್ ರಿಜಿಜು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 

ಪಾರ್ಲಿಮೆಂಟ್ ಫೋಟೋ ಶೂಟ್ ವೇಳೆ ನಡೆದ ಸಂಭಾಷಣೆ

ಏಪ್ರಿಲ್ 18 ರಂದು ಸಂಸತ್ತು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ನಂತರ ನಡೆದ ಘಟನೆಯನ್ನು ಕಿರಣ್ ರಿಜಿಜು ನೆನಪಿಸಿಕೊಂಡು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 'ಸಂಸತ್ತಿನ ಕಲಾಪ ಮುಗಿದ ನಂತರ ನಾವು ಫೋಟೋಗೆ ಫೋಸ್ ನೀಡುತ್ತಿದ್ದಾಗ ಶಶಿ ತರೂರ್ ನನ್ನ ಬಳಿ ಬಂದರು. ಆಗ ನಡೆದ ಸಂಭಾಷಣೆಯಲ್ಲಿ ಅವರು, ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಇರಬಹುದು. ಆದರೆ, ಯಾವುದೇ ಮಹಿಳೆ ಶಶಿ ತರೂರ್ ಅವರನ್ನು ಮಹಿಳಾ ವಿರೋಧಿ ಎಂದು ಪರಿಗಣಿಸುವುದಿಲ್ಲ ಎಂದರು. ಅವರ ಮಾತಿಗೆ ನಾನೂ ಸಹಮತ ವ್ಯಕ್ತಪಡಿಸಿದೆ, ಹೌದು ಹಾಗೆ ಹೇಳೋಲ್ಲ ಎಂದೆ. ಈ ಬಗ್ಗೆ ರಿಜಿಜು ತಿಳಿಸಿದ್ದಾರೆ.
ಇದರರ್ಥ ಏನು ಹೇಳಿ ತರೂರ್ ಅವರು ಪರೋಕ್ಷವಾಗಿ ತಮ್ಮ ಪಕ್ಷ  ಮಹಿಳಾ ವಿರೋಧಿ ಧೋರಣೆ ಹೊಂದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ರಿಜಿಜು ವ್ಯಾಖ್ಯಾನಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ  ಸೋಲು, ಕಾಂಗ್ರೆಸ್ ಕಾರಣ

ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ 131ನೇ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ಸೋತಿತ್ತು. ಈ ಬಗ್ಗೆ ಕಿರಣ್​ ರಿಜಿಜು ಕಿಡಿಕಾರಿದ್ದಾರೆ. ಮಹಿಳೆಯರ ಹಕ್ಕಿನ ವಿರುದ್ಧ ಮತ ಚಲಾಯಿಸುತ್ತಾರೆ ಎನ್ನುವುದನ್ನು ನಾನು ನಿಜಕ್ಕೂ ಅರಿತುಕೊಂಡಿರಲಿಲ್ಲ. ಕಾಂಗ್ರೆಸ್​. ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ಮಹಿಳೆಯರ ವಿರುದ್ಧ ಇದೆ. ದೇಶದ ಮಹಿಳೆಯರು ಅವರಿಗೆ ಪಾಠ ಕಲಿಸುತ್ತಾರೆ ಎಂದರು.
ಕಾಂಗ್ರೆಸ್​​​​  ಮಹಿಳೆ ಪರ ಇದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಸರ್ಕಾರ ಮೀಸಲಾತಿ ಕ್ಷೇತ್ರ ಮರುವಿಂಗಡನೆಯೊಂದಿಗೆ ಜೋಡಿಸಿರುವುದು ಅಪಾಯಕಾರಿ. ದಕ್ಷಿಣ ಭಾರತ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆ ತರಬಹುದು ಎಂದು ರೂರ್​ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net