ಚಿನ್ನ ಮತ್ತು ನಗದು ಕೈಸೇರುತ್ತಿದ್ದಂತೆಯೇ ಕಿರಾತಕಿಯರು, ಚಾಣಾಕ್ಷತನದಿಂದ ಜಾಗ ಖಾಲಿ ಮಾಡಿದ್ದಾರೆ. ಅವರು ಮನೆಯಿಂದ ಹೋದ ಕೆಲ ಸಮಯಗಳ ಬಳಿಕ ತಾನು ಮೋಸ ಹೋಗಿರುವುದನ್ನು ಅರಿತ ಸ್ವರ್ಣಲತಾ, ಕೂಡಲೇ ಅಂತಿಕ್ಕಾಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಖಾಕಿ ಪಡೆ, ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಅವರು ಚಿನ್ನದಂಗಡಿಗೆ ಮಾರಿದ್ದ ಎಲ್ಲ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡು, ಸ್ವರ್ಣಲತಾ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).