ಭೋಜಶಾಲಾ 11ನೇ ಶತಮಾನದ ಸ್ಮಾರಕವಾಗಿದ್ದು, ಇದನ್ನು ಹಿಂದೂಗಳು ವಾಗ್ವೇವಿ (ಸರಸ್ವತಿ) ದೇವಸ್ಥಾನ ಎಂದು ನಂಬಿದರೆ, ಮುಸ್ಲಿಂ ಸಮುದಾಯವು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ. ಭಾರತೀಯ ಪುರಾತತ್ವ ಇಲಾಖೆಯ (ASI) 2003ರ ವ್ಯವಸ್ಥೆಯಂತೆ, ಹಿಂದೂಗಳಿಗೆ ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಮರಿಗೆ ಪ್ರತಿ ಶುಕ್ರವಾರ ನಮಾಜ್ ಮಾಡಲು ಅವಕಾಶ ನೀಡಲಾಗಿತ್ತು. 2016 ರಲ್ಲಿ ಬಸಂತ್ ಪಂಚಮಿ ಶುಕ್ರವಾರ ಬಂದಾಗ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು, ವಿವಾದಿತ ಸ್ಥಳದಲ್ಲಿ ಪ್ರಾರ್ಥನೆ ಸಮಯದ ಬಗ್ಗೆ ಧಾರ್‌ನಲ್ಲಿ ಪ್ರತಿಭಟನೆಗಳು ಮತ್ತು ಘರ್ಷಣೆಗಳು ನಡೆದವು(ಏಜೆನ್ಸೀಸ್).