ಮಾಲಿನ್ಯ ವಿರೋಧಿ ಮುಖವಾಡಗಳನ್ನು ಧರಿಸಿ, ಸಾಂಟಾ ಕ್ಲಾಸ್ ವೇಷಭೂಷಣಗಳಲ್ಲಿ ಇಬ್ಬರು ಪುರುಷರು ಕನ್ನಾಟ್ ಪ್ಲೇಸ್ ಬೀದಿಗಳಲ್ಲಿ ಮೂರ್ಛೆ ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಭಾರದ್ವಾಜ್ ಸೇರಿದಂತೆ ಇತರರು ಅವರಿಗೆ ಸಿಪಿಆರ್ ಮಾಡುತ್ತಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲಿಯೇ ಉಳಿದಿದ್ದು , ಗುರುವಾರ ವಾಯು ಗುಣಮಟ್ಟ ಸೂಚ್ಯಂಕ (AQI) 358 ರಷ್ಟಿತ್ತು. ಹೀಗಾಗಿ ಆಮ್ ಆದ್ಮಿ ಈ ವಿಶಿಷ್ಟ ಪ್ರತಿಭಟನೆ ನಡೆಸಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಎಎಪಿ ನಡುವಿನ ತೀವ್ರ ವಾಗ್ವಾದದ ನಡುವೆಯೇ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಒಂದು ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಆಪ್, ನಗರವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ.