ಒಬ್ಬ ಅಭಿಮಾನಿ ಬಸಿರಿನ ವೇಳೆ ತೂಕ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, ಈಗಾಗಲೇ 11 ಕೆಜಿ ತೂಕ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ ‘ಮಾಮ್ ಬ್ರೈನ್’ ಬಗ್ಗೆ ಹೇಳಿಕೊಂಡಿದ್ದು, ಕೆಲವೊಮ್ಮೆ ಏನು ಹೇಳಬೇಕು ಅಂತ ಗೊತ್ತಿಲ್ಲದಿದ್ದರೂ ವಾಕ್ಯ ಶುರು ಮಾಡಿಬಿಡುತ್ತೇನೆ ಎಂದು ಹಂಚಿಕೊಂಡಿದ್ದಾರೆ. ಇದಕ್ಕೆ ಸಮಂತಾ ಕೂಡ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಹೊಸ ತಾಯಿ ಮಗುವಿಗೆ ಹಾಲುಣಿಸುವುದು, ತೂಗುವುದು ಹೀಗೆ ದಿನವಿಡೀ ಬ್ಯುಸಿಯಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದಕ್ಕೆ ಸಮಂತಾ, ‘ಅದು ಈಗಾಗಲೇ ಫುಲ್ಟೈಮ್ ಜಾಬ್ನಂತೆ ಕಾಣ್ತಿದೆ’ ಎಂದು ತಮಾಷೆಯಾಗಿ ಹೇಳಿದ್ದಾರೆ.