ಬರೋಬ್ಬರಿ 23 ಕೋಟಿ ರೂ. ವಂಚನೆ; ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗೆ ನಾಮಹಾಕಿದ 195 ಗ್ರಾಹಕರು; ಎರಡು ವರ್ಷಗಳ ಬಳಿಕ ಪತ್ತೆ | fake gold

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮುಂಬೈ: ಮಹಾರಾಷ್ಟ್ರದ ನಾಗ್ಪುರದ ಒಂಬತ್ತು ಐಸಿಐಸಿಐ ಬ್ಯಾಂಕ್ ಶಾಖೆಗಳಲ್ಲಿ ನಕಲಿ ಚಿನ್ನವನ್ನು(fake gold) ಅಡವಿಡಲಾಗಿದೆ ಎಂದು ಬ್ಯಾಂಕ್​ನ ಅಧಿಕಾರಿಗಳು ತಮ್ಮ ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಕಂಡುಕೊಂಡ ಬಳಿಕ ಬರೋಬ್ಬರಿ 23 ಕೋಟಿ ರೂ. ಹಗರಣ ಬಯಲಿಗೆ ಬಂದಿದೆ.
ಈ ವಂಚನೆಯೂ ಜನವರಿ 2023 ಮತ್ತು 2025 ಅಕ್ಟೋಬರ್ ನಡುವೆ ನಡೆದಿದ್ದು, ಬ್ಯಾಂಕಿನ ಒಂಬತ್ತು ವಿಭಿನ್ನ ಶಾಖೆಗಳಲ್ಲಿ ಅಡವಿಟ್ಟ ಆಭರಣಗಳು ವಾಸ್ತವವಾಗಿ ಚಿನ್ನವಲ್ಲ, ಬದಲಾಗಿ ನಕಲಿ ಎಂದು ತಿಳಿದುಬಂದಿದೆ. ಬ್ಯಾಂಕ್ ತನ್ನ ಚಿನ್ನದ ಸಾಲ ಬಂಡವಾಳದ ಆಂತರಿಕ ಲೆಕ್ಕಪರಿಶೋಧನೆಯನ್ನು ನಡೆಸಿದಾಗ ಈ ಹಗರಣ ಬೆಳಕಿಗೆ ಬಂದಿದೆ.
ಈ ಕುರಿತು ಐಸಿಐಸಿಐ ಬ್ಯಾಂಕಿನ ವಲಯ ಕಚೇರಿಯ ಉದ್ಯೋಗಿ ಧನಂಜಯ್ ರಮೇಶ್ ಥಿಟ್ಟೆ ಅವರು ನೀಡಿದ ದೂರಿನ ಮೇರೆಗೆ ಧಂತೋಲಿ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವರದಿಗಳ ಪ್ರಕಾರ, ಒಟ್ಟು 195 ಖಾತೆದಾರರು ಈ ಸಾಲಗಳನ್ನು ವಂಚನೆಯಿಂದ ಪಡೆದುಕೊಂಡಿದ್ದಾರೆ. ಚಿನ್ನದ ಶುದ್ಧತೆಯನ್ನು ಪರಿಶೀಲಿಸುವ ಜವಾಬ್ದಾರಿಯುತ ಮೌಲ್ಯಮಾಪಕರಿಂದ ಕ್ಲಿಯರೆನ್ಸ್ ಅಥವಾ ಗ್ರೀನ್ ಸಿಗ್ನಲ್ ಇಲ್ಲದೆ ಇಷ್ಟೊಂದು ದೊಡ್ಡ ಸಾಲಗಳನ್ನು ಪಡೆಯುವುದು ಅಸಾಧ್ಯವಾದ್ದರಿಂದ, ಬ್ಯಾಂಕ್ ನೌಕರರು ಅಥವಾ ಅಧಿಕಾರಿಗಳು ಸಹ ಈ ಸಿಂಡಿಕೇಟ್‌ನ ಭಾಗವಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net