2.20 ಲಕ್ಷದ ಬುಲೆಟ್‌ನಲ್ಲಿ ಇಲಿ ಸಂಸಾರ! 6 ತಿಂಗಳ ಬಳಿಕ ಬೈಕ್ ತೆಗೆದಾಗ ಮಾಲೀಕನಿಗೆ ಶಾಕ್ | Rat family in a bullet

6 ತಿಂಗಳು ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಒಳಗಿದ್ದ ಇಲಿಗಳು
6 ತಿಂಗಳು ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಒಳಗಿದ್ದ ಇಲಿಗಳು
Published on

ಪ್ರಮುಖ ಮುಖ್ಯಾಂಶಗಳು

  • 2.20 ಲಕ್ಷದ ರಾಯಲ್ ಎನ್‌ಫೀಲ್ಡ್ ಬುಲೆಟ್​​ನಲ್ಲಿ ಇಲಿ ಸಂಸಾರ
  • 6 ತಿಂಗಳು ಬೈಕ್ ಬಳಕೆ ಮಾಡದೇ ಒಂದೇ ಕಡೆ ಪಾರ್ಕಿಂಗ್
  • ಇಂಜಿನ್ ಭಾಗದ ವೈರ್‌ಗಳನ್ನು ಕಚ್ಚಿ ಹಾಳು ಮಾಡಿದ್ದ ಇಲಿ
Rat family in a bullet: ಹೊಸ ಬೈಕ್‌ ಅಂದ್ರೆ ಅದನ್ನು ಜೋಪಾನವಾಗಿ ನೋಡಿಕೊಳ್ಳೋದು ಸಹಜ. ಅದರಲ್ಲೂ 2.20 ಲಕ್ಷ ರೂ. ಕೊಟ್ಟು ಖರೀದಿಸಿದ ರಾಯಲ್ ಎನ್‌ಫೀಲ್ಡ್ ಬುಲೆಟ್ ಅಂದ್ರೆ ಇನ್ನೂ ಜಾಸ್ತಿ ಕಾಳಜಿ ಇರುತ್ತೆ. ಆದ್ರೆ ಇಲ್ಲಿ, ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್‌ನೊಳಗೆ ಇಲಿ ಗೂಡು ಕಟ್ಟಿಕೊಂಡು ಸಂಸಾರ ಮಾಡಿದೆ. ಇದೀಗ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ವ್ಯಕ್ತಿಯೊಬ್ಬರು ಸುಮಾರು 2.20 ಲಕ್ಷ ರೂ. ನೀಡಿ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ ಖರೀದಿಸಿದ್ದರು. ಕೆಲ ತಿಂಗಳು ಬೈಕ್ ಬಳಸಿದ ಬಳಿಕ, ಸುಮಾರು 6 ತಿಂಗಳ ಕಾಲ ಬೈಕ್‌ನ್ನು ಮನೆಯ ಬಳಿ ನಿಲ್ಲಿಸಿ ಹೋಗಿದ್ದರು. ಕೆಲ ತಿಂಗಳ ಬಳಿಕ ವಾಪಸ್ ಬಂದ ಅವರು ಎಂದಿನಂತೆ ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಬೈಕ್ ಸ್ಟಾರ್ಟ್ ಆಗಲೇ ಇಲ್ಲ.

ಮೆಕ್ಯಾನಿಕ್ ಬಳಿ ಬಯಲಾಯ್ತು ಅಸಲಿ ಕಥೆ


ಬೈಕ್ ಸ್ಟಾರ್ಟ್ ಆಗದಿದ್ದರಿಂದ ಮೆಕ್ಯಾನಿಕ್ ಬಂದು ಸೈಡ್ ಪ್ಯಾನೆಲ್ ಹಾಗೂ ಇಂಜಿನ್ ಭಾಗವನ್ನು ಬಿಚ್ಚಿ ನೋಡಿದಾಗ ಕಂಡ ದೃಶ್ಯ ಅಚ್ಚರಿ ಮೂಡಿಸಿತ್ತು. ಬೈಕ್‌ನ ಒಳಗಿದ್ದ ಹಲವು ವೈರ್‌ಗಳನ್ನು ಇಲಿಗಳು ಕಚ್ಚಿ ಹಾಳು ಮಾಡಿದ್ದವು. ಅಷ್ಟೇ ಅಲ್ಲ, ಬಹಳ ದಿನ ಬೈಕ್ ಒಂದೇ ಕಡೆ ನಿಂತಿದ್ದರಿಂದ ಅದರೊಳಗೆ ಇಲಿ ಮನೆ ಮಾಡಿಕೊಂಡಿತ್ತು. ಇದಕ್ಕಿಂತ ಶಾಕ್ ಕೊಟ್ಟಿದ್ದು, ಆ ಗೂಡಿನಲ್ಲಿ ಇಲಿ ಮರಿಗಳೂ ಪತ್ತೆಯಾಗಿದ್ದು. ಅಂದರೆ ಬೈಕ್‌ನ್ನು ಮಾಲೀಕರು ಬಳಸದೇ ಇಟ್ಟಿದ್ದರಿಂದ ಬುಲೆಟ್‌ ಒಳಗೆ ಇಲಿಗಳ ಕುಟುಂಬವೊಂದು ನೆಲೆಸಿತ್ತು.

ಬೈಕ್‌ನ್ನು ಹೆಚ್ಚು ದಿನ ನಿಲ್ಲಿಸಿದರೇ ಎಚ್ಚರ

ವಾಹನಗಳನ್ನು ದೀರ್ಘಕಾಲ ಒಂದೇ ಕಡೆ ನಿಲ್ಲಿಸಿದಾಗ ಇಲಿ ಸೇರಿದಂತೆ ಕೆಲ ಸಣ್ಣ ಪ್ರಾಣಿಗಳು ಅದರೊಳಗೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಅದರಲ್ಲೂ ವೈರ್‌ಗಳು, ಇನ್ಸುಲೇಷನ್‌ ಮತ್ತು ಎಂಜಿನ್ ಸುತ್ತಲಿನ ಭಾಗಗಳು ಇಲಿಗಳ ಕಚ್ಚಿಹಾಕಿದ್ದವು. ಆದ್ದರಿಂದ ಬೈಕ್‌ನ್ನು ಹಲವು ದಿನ ಬಳಸದೇ ನಿಲ್ಲಿಸುವುದಾದರೆ ಕನಿಷ್ಠ ವಾರಕ್ಕೊಮ್ಮೆ ಸ್ಟಾರ್ಟ್ ಮಾಡಿ, ವಾಹನದ ಸುತ್ತಮುತ್ತ ಗಮನಿಸುವುದು ಉತ್ತಮ. ಬುಲೆಟ್‌ ಒಳಗೆ ಬಂದ ಈ ‘ಅತಿಥಿಗಳು’ ಮಾತ್ರ ಬೈಕ್ ಮಾಲೀಕನಿಗೆ ಭಾರಿ ತಲೆನೋವಾಗಿ ಪರಿಣಮಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net