ಅಠಾವಳೆ, ತಾವ್ಡೆಗೆ ರಾಜ್ಯಸಭಾ ಲಕ್​​.. ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಬಿಜೆಪಿ ಪಟ್ಟಿ ಇಲ್ಲಿದೆ ನೋಡಿ! | BJP Rajya Sabha List

BJP Rajya Sabha List  | ಕೇಂದ್ರ ಸಚಿವ ರಾಮದಾಸ್ ಅಠಾವಳೆಗೆ ರಾಜ್ಯಸಭಾ ಟಿಕೆಟ್​
BJP Rajya Sabha List | ಕೇಂದ್ರ ಸಚಿವ ರಾಮದಾಸ್ ಅಠಾವಳೆಗೆ ರಾಜ್ಯಸಭಾ ಟಿಕೆಟ್​
Published on
ಮುಂಬೈ: ಮುಂಬರುವ ರಾಜ್ಯಸಭಾ ಚುನಾವಣೆಗೆ ಮಹಾರಾಷ್ಟ್ರದಿಂದ ಸ್ಪರ್ಧಿಸಲಿರುವ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ (BJP Rajya Sabha List) ಬುಧವಾರ ಅಧಿಕೃತವಾಗಿ ಪ್ರಕಟಿಸಿದ್ದು, ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ಮಾಯಾ ಚಿಂತಾಮನ್ ಇವ್ನಾಟೆ ಮತ್ತು ರಾಮರಾವ್ ವಾಡ್ಕುಟೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಬಿಹಾರ ಬಿಜೆಪಿಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ತಾವ್ಡೆ, ಏಪ್ರಿಲ್‌ನಲ್ಲಿ ಅವಧಿ ಮುಕ್ತಾಯಗೊಳ್ಳಲಿರುವ ಮಹಾರಾಷ್ಟ್ರದ ಏಳು ರಾಜ್ಯಸಭಾ ಸ್ಥಾನಗಳ ಪೈಕಿ ಒಂದಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಸ್ಪಷ್ಟಪಡಿಸಿದೆ.
ಕೇವಲ ಮಹಾರಾಷ್ಟ್ರ ಮಾತ್ರವಲ್ಲದೆ, ವಿವಿಧ ರಾಜ್ಯಗಳ ಒಟ್ಟು ಒಂಬತ್ತು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದ್ದು, ಬಿಹಾರದಿಂದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಮತ್ತು ಶಿವೇಶ್ ಕುಮಾರ್ ಕಣಕ್ಕಿಳಿಯಲಿದ್ದರೆ, ಅಸ್ಸಾಂನಿಂದ ತೇರಶ್ ಗೋವಲ್ಲ ಮತ್ತು ಜೋಗೆನ್ ಮೋಹನ್ ನಾಮನಿರ್ದೇಶನಗೊಂಡಿದ್ದಾರೆ.
ಛತ್ತೀಸ್‌ಗಢದಿಂದ ಲಕ್ಷ್ಮಿ ವರ್ಮಾ ಮತ್ತು ಹರಿಯಾಣದಿಂದ ಸಂಜಯ್ ಭಾಟಿಯಾಗೆ ಟಿಕೆಟ್ ನೀಡಲಾಗಿದೆ. ಒಡಿಶಾದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮನಮೋಹನ್ ಸಮಲ್ ಮತ್ತು ಸುಜೀತ್ ಕುಮಾರ್ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ಈ ಆಯ್ಕೆ ಮುಂಬರುವ ಚುನಾವಣಾ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆಯಿದೆ.

ಎನ್‌ಡಿಎ ಅಭ್ಯರ್ಥಿಯಾಗಿ ಉಪೇಂದ್ರ ಕುಶ್ವಾಹ ಹೆಸರು ಫೈನಲ್..

ಷ್ಟ್ರೀಯ ಲೋಕ ಮೋರ್ಚಾ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹರನ್ನು ಬಿಹಾರದಿಂದ ರಾಜ್ಯಸಭೆಗೆ ಎನ್‌ಡಿಎ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದು ವರದಿಯಾಗಿದ್ದು, ಕುಶ್ವಾಹ ಮಾರ್ಚ್ 5 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ವರಿಷ್ಠರೊಂದಿಗೆ ನಡೆದ ಸುದೀರ್ಘ ಚರ್ಚೆಯ ಬಳಿಕ ಕುಶ್ವಾಹ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾರಕಾಟ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಕುಶ್ವಾಹಗೆ ಬಿಜೆಪಿ ಮತ್ತೊಂದು ಅವಕಾಶ ನೀಡಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಲು, ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇದು ಬಿಜೆಪಿಯ ಮಾಸ್ಟರ್ ಸ್ಟ್ರೋಕ್ ಎನ್ನಲಾಗುತ್ತಿದೆ.
ಬಿಹಾರ ರಾಜಕೀಯದಲ್ಲಿ ಜಾತಿ ಸಮೀಕರಣ ತುಂಬಾ ಮುಖ್ಯ, ಉಪೇಂದ್ರ ಕುಶ್ವಾಹ (ಲವ-ಕುಶ) ಸಮುದಾಯದ ಪ್ರಬಲ ನಾಯಕರು. ಈ ಸಮುದಾಯವು ಗಮನಾರ್ಹ ಮತಬ್ಯಾಂಕ್ ಹೊಂದಿದೆ. ಇವರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ನಿತೀಶ್ ಕುಮಾರ್ ಮತ್ತು ಬಿಜೆಪಿಯ ಮೈತ್ರಿಕೂಟವು ಒಬಿಸಿ ಮತಗಳನ್ನು ತನ್ನತ್ತ ಸೆಳೆಯಲು ಯೋಜಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net