5 ವರ್ಷ ಹಿಂದೆ ಮಾಡಿದ್ದ ಆ ಕೆಲಸಕ್ಕೆ ಈಗ ಶಿಕ್ಷೆ! MNC ಕೆಲಸಕ್ಕೆ ಕಂಟಕ; ಟೆಕ್ಕಿಗೆ ಬಿಗ್ ಶಾಕ್ | Big shock for techie

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 5 ವರ್ಷ ಹಿಂದಿನ 1 ತಿಂಗಳ ಉದ್ಯೋಗ ಟೆಕ್ಕಿಗೆ ಕಂಟಕ
  • ದೊಡ್ಡ MNCಯ ಎಲ್ಲಾ ಟೆಕ್ನಿಕಲ್ ರೌಂಡ್‌ಗಳು ಕ್ಲಿಯರ್
  • ಹಿನ್ನೆಲೆ ಪರಿಶೀಲನೆ ವೇಳೆ ಹಳೆಯ ಪಿಎಫ್ ದಾಖಲೆ ಪತ್ತೆ
Techie Job Rejection: ಐದು ವರ್ಷ ಹಿಂದಿನ ಕೇವಲ ಒಂದು ತಿಂಗಳ ಜಾಬ್‌ ಈಗ ಟೆಕ್ಕಿಯ ಹೊಸ ಕೆಲಸಕ್ಕೆ ಮುಳ್ಳಾಗಿದೆ. ದೊಡ್ಡ ಎಂಎನ್‌ಸಿಯೊಂದರಲ್ಲಿ ನಾಲ್ಕು ವರ್ಷ ಅನುಭವ ಬೇಕಿದ್ದ ಹುದ್ದೆಗೆ ಅಪ್ಲೈ ಮಾಡಿದ್ದ ಟೆಕ್ಕಿ, ಎಲ್ಲ ಟೆಕ್ನಿಕಲ್ ರೌಂಡ್‌ಗಳನ್ನೂ ಕ್ಲಿಯರ್ ಮಾಡಿದ್ದ. ಆದ್ರೆ, ಹಿನ್ನೆಲೆ ಪರಿಶೀಲನೆ ವೇಳೆ ಹಳೆಯ ಜಾಬ್‌ನ ದಾಖಲೆ ಸಿಕ್ಕಿಬಿದ್ದು, ನೇಮಕಾತಿ ಪ್ರಕ್ರಿಯೆ ನಿಂತಿದೆ.
ಈ ಬಗ್ಗೆ ಟೆಕ್ಕಿಯೊಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಐದು ವರ್ಷ ಹಿಂದೆ ಯುವಕನಾಗಿದ್ದಾಗ, ಆರ್ಥಿಕವಾಗಿ ಕಷ್ಟದಲ್ಲಿದ್ದ ಕಾರಣ ತಿಂಗಳಿಗೆ ಸುಮಾರು 10 ಸಾವಿರ ರೂ. ಸಂಬಳಕ್ಕೆ ಕಂಪನಿಯೊಂದರಲ್ಲಿ ಜಾಯಿನ್ ಆಗಿದ್ದರಂತೆ. ಆದ್ರೆ, ಕೆಲವೇ ದಿನಗಳಲ್ಲಿ ಜಾಬ್ ಬಿಟ್ಟಿದ್ದು, ಸರಿಯಾಗಿ ಎಕ್ಸಿಟ್ ಪ್ರೋಸೆಸ್ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಆ ಒಂದು ತಿಂಗಳ ಜಾಬ್‌ನ ದಾಖಲೆ ಈಗಲೂ ಪಿಎಫ್ ಖಾತೆಯಲ್ಲಿ ಕಾಣಿಸುತ್ತೆ. ಆದ್ರೆ, ತಮ್ಮ ರೆಸ್ಯೂಮೆಯಲ್ಲಿ ಈ ಹುದ್ದೆಯನ್ನು ಹಾಕಿರಲಿಲ್ಲ ಎಂದು ಟೆಕ್ಕಿ ತಿಳಿಸಿದ್ದಾರೆ.

ಆಗ ನಾನು ಚಿಕ್ಕವನಾಗಿದ್ದೆ

ಹೊಸ ಎಂಎನ್‌ಸಿಯ ಹಿನ್ನೆಲೆ ಪರಿಶೀಲನೆ ವೇಳೆ ಐದು ವರ್ಷ ಹಿಂದಿನ ಈ ದಾಖಲೆ ಸಿಕ್ಕಿಬಿದ್ದಿದೆ. ರೆಸ್ಯೂಮೆಯಲ್ಲಿ ಹಾಕಿದ್ದ ಕಂಪನಿಗಳಿಗೆ ಸಂಬಂಧಿಸಿದ ಬ್ಯಾಂಕ್ ಸ್ಟೇಟ್‌ಮೆಂಟ್, ಸ್ಯಾಲರಿ ಸ್ಲಿಪ್, ಎಕ್ಸ್‌ಪೀರಿಯನ್ಸ್ ಲೆಟರ್ ಹಾಗೂ ಆಫರ್ ಲೆಟರ್‌ಗಳನ್ನು ನೀಡಿದ್ದರೂ, ಹಳೆಯ ಒಂದು ತಿಂಗಳ ಕೆಲಸದ ವಿಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ‘ಆಗ ನಾನು ಚಿಕ್ಕವನಾಗಿದ್ದೆ, ದುಡ್ಡಿನ ಸಮಸ್ಯೆ ಇತ್ತು. ಆಗ ಮಾಡಿದ್ದು ತಪ್ಪು ಅಂತ ಈಗ ಅರ್ಥವಾಗ್ತಿದೆ’ ಎಂದು ಟೆಕ್ಕಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್‌ ರೆಡ್ಡಿಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಳೆ ಕಂಪನಿಯನ್ನು ಸಂಪರ್ಕಿಸಿ ಎಕ್ಸಿಟ್ ಲೆಟರ್ ತೆಗೆದುಕೊಳ್ಳಿ ಎಂದು ಹಲವರು ಸಲಹೆ ನೀಡಿದ್ದಾರೆ. ಹಿನ್ನೆಲೆ ಪರಿಶೀಲನೆ ವೇಳೆ ಹಳೆಯ ಜಾಬ್‌ ದಾಖಲೆಗಳನ್ನೂ ಎಂಎನ್‌ಸಿಗಳು ಗಂಭೀರವಾಗಿ ಪರಿಗಣಿಸುತ್ತವೆ ಎಂದು ಕೆಲವರು ಹೇಳಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net