ಮಹಿಳೆಯ ಬಾಕ್ಸಿಂಗ್‌ ವಿಭಾಗದಲ್ಲಿ ಪ್ರಿಯಾ ಘಾಂಗ್ಹಾಸ್, ಅರುಂಧತಿ ಕಮಾಲ್: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ 11ಕ್ಕೆ ಏರಿಕೆಯಾದ ಚಿನ್ನದ ಪದಕ | CWC 2026

ಪ್ರಿಯಾ ಘಾಂಗ್ಹಾಸ್ ಮತ್ತು ಅರುಂಧತಿ ಚೌಧರಿ
ಪ್ರಿಯಾ ಘಾಂಗ್ಹಾಸ್ ಮತ್ತು ಅರುಂಧತಿ ಚೌಧರಿ
Published on
CWC 2026: ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾನುವಾರ(ಆ. 01) ಮಹಿಳೆಯರ 60 ಕೆಜಿ ಬಾಕ್ಸಿಂಗ್‌ ಫೈನಲ್​ನಲ್ಲಿ ಭಾರತದ ಪ್ರಿಯಾ ಘಾಂಗ್ಹಾಸ್, 70 ಕೆಜಿ ವಿಭಾಗದಲ್ಲಿ ಅರುಂಧತಿ ಚೌಧರಿ ಚಿನ್ನದ ಪದಕಗಳಿಗೆ ಮುತ್ತಿಟ್ಟಿದ್ದು, ಒಟ್ಟಾರೆ ಭಾರತದ ಚಿನ್ನದ ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮಹಿಳೆಯರ 60 ಕೆಜಿ ಬಾಕ್ಸಿಂಗ್‌ ಫೈನಲ್​ನಲ್ಲಿ ಭಾರತದ ಪ್ರಿಯಾ ಘಾಂಗ್ಹಾಸ್, ಕೆನಡಾದ ಮೇರಿ-ಬಥೌಲ್ ಅಲ್-ಅಹ್ಮದಿಹ್ ಅವರನ್ನು 4-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರೆ, ಅರುಂಧತಿ ಚೌಧರಿ, ಇಂಗ್ಲೆಂಡ್‌ನ ಚಾಂಟೆಲ್ಲೆ ರೀಡ್ ಅವರನ್ನು 5-0 ಅಂತರದಿಂದ ಸೋಲಿಸಿ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅರುಂಧತಿ ಚೌಧರಿ ಅವರ ಬಾಕ್ಸಿಂಗ್ ಚಿನ್ನದ ಪದಕದೊಂದಿಗೆ, ಭಾರತದ ಪದಕಗಳ ಸಂಖ್ಯೆ 34 ಕ್ಕೆ ಏರಿದೆ. ಇದರೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶವು ನಾಲ್ಕನೇ ಸ್ಥಾನಕ್ಕೆ ಏರಿದೆ. ಭಾರತದ ಕ್ರೀಡಾಪಟುಗಳು ಇದುವರೆಗೂ 11 ಚಿನ್ನ, 15 ಬೆಳ್ಳಿ ಮತ್ತು 8 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಇನ್ನು ಮಹಿಳೆಯರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಆಸ್ಟ್ರೇಲಿಯಾದ ಎಮ್ಮಾ-ಸ್ಯೂ ಗ್ರೀನ್‌ಟ್ರೀ ಅವರನ್ನು ಎದುರಿಸಲಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net