ಸತ್ಯ ಎದುರಿಸಲು ಪ್ರಧಾನಿಗೆ ಧೈರ್ಯವಿಲ್ಲ: ಮಾಜಿ ಸೇನಾ ಮುಖ್ಯಸ್ಥರ ಪುಸ್ತಕದ ವಿಚಾರವಾಗಿ ರಾಹುಲ್ ಗಾಂಧಿ ವಾಗ್ದಾಳಿ! Rahul Gandhi
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಚರ್ಚೆಗೆ ಬರಲು ಹೆದರುತ್ತಿದ್ದಾರೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ಸುಳ್ಳು ಹೇಳಿದ್ದಾರೆ
ಸಂಸತ್ತು ಮಂಗಳವಾರದವರೆಗೆ ಮುಂದೂಡಿಕೆ
ನವದೆಹಲಿ: ಗಲ್ವಾನ್ ಕಣಿವೆ ಘರ್ಷಣೆಯ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಟಿಪ್ಪಣಿಯನ್ನು ಓದಿದ ಬಳಿಕ ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಚರ್ಚೆಗೆ ಬರಲು ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನರವಾಣೆ ಅವರ ಆತ್ಮಚರಿತ್ರೆ ಪ್ರಕಟವಾಗಿದೆ ಮತ್ತು ಅದರ ಪ್ರತಿ ಅವರ ಬಳಿ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ಸುಳ್ಳು ಹೇಳಿದ್ದಾರೆ, ಸರ್ಕಾರವು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಬಯಸದ ಕಾರಣ ಸದನವನ್ನು ಮುಂದೂಡಿದೆ ಎಂದು ಹೇಳಿದರು.
ಪ್ರಧಾನಿ ಸದನಕ್ಕೆ ಬರಲು ಹೆದರುತ್ತಿದ್ದರು, ಕಾರಣ ನಮ್ಮ ಸದಸ್ಯರು ಪ್ರಧಾನಿಯ ಮೇಲೆ ದಾಳಿ ಮಾಡುತ್ತಾರಂದಲ್ಲ, ಅವರಿಗೆ ಸತ್ಯವನ್ನು ಎದುರಿಸುವ ಧೈರ್ಯವಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿಯವರ ಮೇಲೆ ಯಾರಾದರೂ ದಾಳಿ ಮಾಡುವುದಾಗಿ ಹೇಳಿದ್ದರೆ, ದಯವಿಟ್ಟು ತಕ್ಷಣ ಎಫ್‌ಐಆರ್ ದಾಖಲಿಸಿ. ಆ ವ್ಯಕ್ತಿಯನ್ನು ಬಂಧಿಸಿ. ನೀವು ಏಕೆ ಹಾಗೆ ಮಾಡುತ್ತಿಲ್ಲ? ಏಕೆಂದರೆ ಆ ರೀತಿಯ ಯಾವುದೇ ಘಟನೆ ಬಡೆದಿಲ್ಲ ಎಂದೇ ಅರ್ಥವಲ್ಲವೇ ಎಂದರು.
ಇಡೀ ವಿರೋಧ ಪಕ್ಷವು ಸಂಸತ್ತಿನಲ್ಲಿ ಚರ್ಚೆ ನಡೆಸಲು ಉತ್ಸುಕವಾಗಿದೆ, ಆದರೆ ಅದು ಆಗಬೇಕಾದರೆ, ಸರ್ಕಾರವು ಅವರ ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಯುನೈಟೆಡ್ ಸ್ಟೇಟ್ಸ್ (ಯುಎಸ್) ಜೊತೆಗಿನ ಇತ್ತೀಚಿನ ವ್ಯಾಪಾರ ಒಪ್ಪಂದದಿಂದಾಗಿ ಸರ್ಕಾರವು 2026-27ರ ಕೇಂದ್ರ ಬಜೆಟ್ ಕುರಿತು ಚರ್ಚೆ ನಡೆಸಲು ಬಯಸುವುದಿಲ್ಲ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
ನನ್ನ ಅಂದಾಜಿನ ಪ್ರಕಾರ, ಯುಎಸ್ ಒಪ್ಪಂದದ ವಿಷಯ, ಅದನ್ನು ಮಾಡಿದ ರೀತಿ, ಏನು ಸಂಭವಿಸಿದೆ, ನಮ್ಮ ರೈತರ ಮೇಲಿನ ಪರಿಣಾಮದ ಬಗ್ಗೆ ಚರ್ಚಿಸಲಾಗುವುದು ಮತ್ತು ಸರ್ಕಾರವು ಅದನ್ನು ಮಾಡಲು ಬಯಸುವುದಿಲ್ಲ ಏಕೆಂದರೆ ಸರ್ಕಾರವು ಬಜೆಟ್ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಚಿಂತಿತವಾಗಿದೆ ಎಂದು ಅವರು ಹೇಳಿದರು.
ಸಂಸತ್ತು ಮಂಗಳವಾರದವರೆಗೆ ಮುಂದೂಡಿಕೆ
ಕೇಂದ್ರ ಬಜೆಟ್ ಮೇಲಿನ ಚರ್ಚೆ ಪ್ರಾರಂಭವಾಗುವ ಮೊದಲು ರಾಹುಲ್ ಗಾಂಧಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಸರ್ಕಾರ ಮತ್ತು ವಿರೋಧ ಪಕ್ಷಗಳು ಒತ್ತಾಯಿಸಿದ ನಂತರ ಲೋಕಸಭೆಯನ್ನು ಮಂಗಳವಾರದವರೆಗೆ ಮುಂದೂಡಲಾಯಿತು.
ಕಲಾಪ ನಡೆಯುತ್ತಿರುವಾಗ, ಸಂಧ್ಯಾ ರೇ ಅವರು ಅಧ್ಯಕ್ಷರಾಗಿದ್ದರು. ಬಜೆಟ್ ಚರ್ಚೆ ಪ್ರಾರಂಭವಾಗುವ ಮೊದಲು ಸದನದಲ್ಲಿ ಮಾತನಾಡಲು ಅವಕಾಶ ನೀಡಲಾಗುವುದು ಎಂದು ಕೆಲವು ವಿರೋಧ ಪಕ್ಷದ ಸಂಸದರು ಮತ್ತು ಸ್ಪೀಕರ್ ಓಂ ಬಿರ್ಲಾ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ, ರೇ ಅವರಿಗೆ ತಿಳಿಸಿದರು. ಆದಾಗ್ಯೂ, ಅಂತಹ ಒಪ್ಪಂದದ ಬಗ್ಗೆ ತನಗೆ ತಿಳಿದಿಲ್ಲ ಎಂದು ರೇ ರಾಹುಲ್ ಗಾಂಧಿಗೆ ತಿಳಿಸಿದರು.
ಈ ಹಂತದಲ್ಲಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಧ್ಯಪ್ರವೇಶಿಸಿ ಅಂತಹ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿಕೊಂಡರು. ರಾಹುಲ್ ಗಾಂಧಿ ಸ್ಪೀಕರ್ ಬಗ್ಗೆ ಏನಾದರೂ ಹೇಳಲು ಬಯಸಿದರೆ ಬಿರ್ಲಾ ಅವರು ಸದನದಲ್ಲಿ ಹಾಜರಿರಬೇಕು ಎಂದು ಹೇಳಿದರು.
ನಂತರ, ರಾಹುಲ್ ಗಾಂಧಿ ಬಿರ್ಲಾ ಅವರನ್ನು ಭೇಟಿಯಾಗಿ, ಅವರು ಸದನದಲ್ಲಿ ಎತ್ತಲು ಬಯಸುವ ವಿಷಯಗಳ ಬಗ್ಗೆ ತಿಳಿಸಿದರು. ಎಂಟು ಕಾಂಗ್ರೆಸ್ ಸಂಸದರ ಅಮಾನತು ಮತ್ತು ಮಹಿಳಾ ಸಂಸದರ ವಿರುದ್ಧದ ಆರೋಪಗಳು ಸೇರಿದಂತೆ ಸಂಸತ್ತಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ರಾಹುಲ್ ಗಾಂಧಿ ಎತ್ತಲು ಬಯಸಿದ್ದರು ಎಂದು ವರದಿಯಾಗಿದೆ,(ಏಜನ್ಸೀಸ್).