ಇಂದು ಮುಂಜಾನೆ ತೈಲ ಕಂಪನಿಗಳು ತೈಲ ಬೆಲೆಯನ್ನು ಪರಿಷ್ಕರಣೆ ಮಾಡಿದ್ದು, ಪರಿಷ್ಕರಣೆಯ ಬಳಿಕ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77ಯಿಂದ 97.77 ರೂಪಾಯಿಗೆ ಏರಿಕೆಯಾದರೆ, ಡೀಸೆಲ್ ದರ ಲೀಟರ್‌ಗೆ 87.67ರಿಂದ 90.67 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್‌ಗೆ 108.74 ರೂ., ಮುಂಬೈನಲ್ಲಿ 106.68 ರೂ. ಹಾಗೂ ಚೆನ್ನೈನಲ್ಲಿ 103.67 ರೂ. ತಲುಪಿದ್ದು, ಪ್ರತಿ ಲೀಟರ್‌ಗೆ 2.83 ರಿಂದ 3.29 ರೂ.ಗಳವರೆಗೆ ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಡೀಸೆಲ್ ಲೀಟರ್‌ಗೆ 95.13 ರೂ., ಮುಂಬೈನಲ್ಲಿ 93.14 ರೂ. ಮತ್ತು ಚೆನ್ನೈನಲ್ಲಿ 95.25 ರೂ.ಗೆ ಏರಿಕೆಯಾಗಿದೆ (ಏಜೆನ್ಸೀಸ್).