ಹಿಜಾಬ್ ಧರಿಸಲು ಅನುಮತಿ ಕೋರಿ ಅರ್ಜಿ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿಗೆ AIMPLB ಸಜ್ಜು | Hijab controversy

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಸಮವಸ್ತ್ರದ ಜೊತೆ ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿನಿ ಅರ್ಜಿ
  • ಹಿಜಾಬ್ ಇಸ್ಲಾಂನ ಅವಿಭಾಜ್ಯ ಆಚರಣೆ ಎಂದು ಸಾಬೀತುಪಡಿಸಿ- ಹೈಕೋರ್ಟ್
  • ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ

Hijab controversy

ಪ್ರಯಾಗ್‌ರಾಜ್‌ನ ಅತ್ತರ್ಸುಯಾದಲ್ಲಿರುವ ಖಾಸಗಿ ಟ್ಯಾಗೋರ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿ 11ನೇ ತರಗತಿಗೆ ಅದೇ ಶಾಲೆಯಲ್ಲಿ ಪ್ರವೇಶ ಪಡೆಯಲು ಮತ್ತು ಹಿಜಾಬ್ ಧರಿಸಲು ಅನುಮತಿ ಕೋರಿ ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ, ಆಗಸ್ಟ್ 21ರಂದು ನ್ಯಾಯಮೂರ್ತಿಗಳಾದ ಜೆ.ಜೆ.ಮುನೀರ್ ಹಾಗೂ ಇಂದರ್ಜಿತ್ ಶುಕ್ಲಾ ಅವರಿದ್ದ ದ್ವಿಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿದೆ. 

ಹಿಜಾಬ್ ಇಸ್ಲಾಂನಲ್ಲಿ ಕಡ್ಡಾಯವೇ ದಾಖಲೆ ಕೊಡಿ?

ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸುವ ಅಗತ್ಯ ದಾಖಲೆಯನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಶಾಲೆಯ ವಿವಿಧ ತರಗತಿಗಳ ಫೋಟೋಗಳನ್ನು ಪರಿಶೀಲಿಸಿದಾಗ, ಅರ್ಜಿದಾರಳನ್ನು ಹೊರತುಪಡಿಸಿ ಅದೇ ಧಾರ್ಮಿಕ ಸಮುದಾಯಕ್ಕೆ ಸೇರಿದ ಇತರೆ ಯಾವುದೇ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿರುವುದು ಕಂಡುಬಂದಿಲ್ಲ ಎಂದು ಕೋರ್ಟ್​ ತೀರ್ಪಿನಲ್ಲಿ ಉಲ್ಲೇಖಿಸಿದೆ.

ತೀರ್ಪಿನಲ್ಲಿ ಗೊಂದಲವಿದೆ ಎಂದು ಎಐಎಂಪಿಎಲ್‌ಬಿ 

ತೀರ್ಪಿನಲ್ಲಿ ಗೊಂದಲವಿದ್ದು, ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಭಾಗ ಎಂಬ ವಿಚಾರವನ್ನು ಮತ್ತೊಮ್ಮೆ ಕೋರ್ಟ್ ಮುಂದೆ ಮಂಡಿಸುವುದಾಗಿ ಎಐಎಂಪಿಎಲ್‌ಬಿ ಸದಸ್ಯ ಹಾಗೂ ಧರ್ಮಗುರು ಖಾಲಿದ್ ರಶೀದ್ ಫಿರಂಗಿ ಮಹಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ವಿದ್ಯಾರ್ಥಿನಿಯ ಅರ್ಜಿಯನ್ನು ವಿರೋಧಿಸಿ, ಖಾಸಗಿ ಅನುದಾನರಹಿತ ಶಾಲೆಯ ಸಮವಸ್ತ್ರ ಮತ್ತು ಆಡಳಿತದ ವಿಚಾರದಲ್ಲಿ ಸರ್ಕಾರದ ನಿಯಂತ್ರಣ ಕಡಿಮೆ ಎಂದು ವಾದಿಸಿತ್ತು. ಸಿಬಿಎಸ್ಇ ಪರ ವಕೀಲರೂ ಇದೇ ವಾದವನ್ನು ಬೆಂಬಲಿಸಿದ್ದರು. ಅಂತಿಮವಾಗಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ..
ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಎಐಎಂಪಿಎಲ್‌ಬಿ ಮುಂದಿನ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಶಾಲಾ ಸಮವಸ್ತ್ರ ಹಾಗೂ ಧಾರ್ಮಿಕ ಹಕ್ಕಿನ ಕುರಿತ ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net