ಮಾ. 09ರಂದು ತಮ್ಮ ಪೀಠ, 5,000 ಪುಟಗಳಿಗೂ ಹೆಚ್ಚು ಉದ್ದವಾದ ಕೆಳ ನ್ಯಾಯಾಲಯದ ತೀರ್ಪನ್ನು ಕೇವಲ ಐದು ನಿಮಿಷಗಳಲ್ಲಿ ವಜಾಗೊಳಿಸಿದೆ. ಅದು ನಮ್ಮನ್ನು ಘಾಸಿಗೊಳಿಸಿದೆ. ಬಳಿಕ ನಾನು ಪ್ರಕರಣವನ್ನು ಈ ಪೀಠದಿಂದ ವರ್ಗಾಯಿಸುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದೆ, ಸಂಬಂಧಪಟ್ಟ ನ್ಯಾಯಾಧೀಶರು ಮಾತ್ರ ಈ ವಿಷಯದಿಂದ ಹಿಂದೆ ಸರಿಯಲು ನಿರ್ಧರಿಸಬಹುದು ಎಂದು ಹೇಳುವ ಲಿಖಿತ ಪ್ರತಿಕ್ರಿಯೆ ನನಗೆ ಬಂದಿದೆ.