ಓಸ್ಚಾಡ್‌ಬ್ಯಾಂಕ್ ವಿವಾದ; ತನ್ನ ಮಧ್ಯವರ್ತಿಯಾಗಿ ಮಾಜಿ ಸಿಜೆಐ ಡಿವೈ ಚಂದ್ರಚೂಡ್ ಅವರನ್ನು ನೇಮಿಸಿದ ರಷ್ಯಾ | D Y Chandrachud

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್
Published on
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ದೀರ್ಘಕಾಲದ ಸಂಘರ್ಷ ನಡುವೆ ಉಕ್ರೇನಿಯನ್ ಸರ್ಕಾರಿ ಸ್ವಾಮ್ಯದ ಓಸ್ಚಾಡ್‌ಬ್ಯಾಂಕ್ ಜೊತೆಗಿನ ಹೂಡಿಕೆ ಒಪ್ಪಂದ ವಿವಾದದಲ್ಲಿ ರಷ್ಯಾ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್(D Y Chandrachud) ಅವರನ್ನು ತನ್ನ ಮಧ್ಯವರ್ತಿಯನ್ನಾಗಿ ನೇಮಿಸಿಕೊಂಡಿದೆ.
1998ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಸಹಿ ಹಾಕಲಾದ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಅಡಿಯಲ್ಲಿ ಈ ವಿವಾದದ ವಿಚಾರಣೆ ನಡೆಯುತ್ತಿದೆ. 2022ರ ನಂತರದ ಸಂಘರ್ಷದಲ್ಲಿ ರಷ್ಯಾದ ದಾಳಿಯಿಂದಾಗಿ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾ ಪ್ರದೇಶಗಳಲ್ಲಿನ ತನ್ನ ಆಸ್ತಿಗಳು ಮತ್ತು ಕಾರ್ಯಾಚರಣೆಗಳಿಗೆ ಗಮನಾರ್ಹ ಹಾನಿಯಾಗಿದೆ ಎಂದು ಆರೋಪಿಸಿ ಓಸ್ಚಾಡ್‌ಬ್ಯಾಂಕ್ ಪ್ರಕರಣ ದಾಖಲಿಸಿದೆ.
ತನ್ನ ಆಸ್ತಿಯ ಹಾನಿಯ ಪರಿಣಾಮವಾಗಿ ನೂರಾರು ಮಿಲಿಯನ್ ಡಾಲರ್ ನಷ್ಟಕ್ಕೆ ಬ್ಯಾಂಕ್ ಪರಿಹಾರ ಕೋರಿದೆ. ಈ ನಿಟ್ಟಿನಲ್ಲಿ ವಿವಾದವನ್ನು ಪರಿಹರಿಸಲು 2025 ಜುಲೈನಲ್ಲಿ ರಷ್ಯಾಕ್ಕೆ ನೋಟಿಸ್‌ಗಳನ್ನು ಕಳುಹಿಸಿತು. ಆದರೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಹಿನ್ನೆಲೆ ಅದು ಅಂತರರಾಷ್ಟ್ರೀಯ ನ್ಯಾಯಮಂಡಳಿಯನ್ನು ಸಂಪರ್ಕಿಸಿತು. ಈಗ ನ್ಯಾಯಮಂಡಳಿ ಮೂವರು ಸದಸ್ಯರ ಮಧ್ಯಸ್ಥಿಕೆ ನ್ಯಾಯಮಂಡಳಿಯನ್ನು ರಚಿಸಲು ಸೂಚಿಸಿದೆ.
ಈ ಹಿನ್ನೆಲೆ ವಿವಾದವನ್ನು ಪರಿಹರಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ, ಕೋಸ್ಟರಿಕಾದ ಡಯಾಲಾ ಜಿಮೆನೆಜ್ ಅವರು ಸಮಿತಿಯ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಉಕ್ರೇನಿಯನ್ ಬ್ಯಾಂಕಿನ ಪರವಾಗಿ ಗ್ರೀಕ್ ಮಧ್ಯಸ್ಥಗಾರ ಸ್ಟಾವ್ರೋಸ್ ಬ್ರೆಕೌಲಾಕಿಸ್ ಅವರನ್ನು ನೇಮಿಸಲಾಗಿದೆ. ಈಗ ರಷ್ಯಾ ಮಾಜಿ ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿದೆ.
ಇನ್ನೂ ಜರ್ಮನ್ ಇಂಧನ ಕಂಪನಿ ವಿಂಟರ್‌ಶಾಲ್ ಡೀ ಮತ್ತು ಉಕ್ರೇನಿಯನ್ ಸರ್ಕಾರಿ ಇಂಧನ ಕಂಪನಿ ಉಕ್ರೆನೆರ್ಗೊ ನಡುವಿನ ಒಪ್ಪಂದದ ವಿವಾದಗಳಲ್ಲಿ ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಲು ಈ ಹಿಂದೆ ರಷ್ಯಾದಿಂದ ಬಂದ ಮನವಿಗಳನ್ನು ಚಂದ್ರಚೂಡ್ತಿ ರಸ್ಕರಿಸಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ಓಸ್ಚಾಡ್‌ಬ್ಯಾಂಕ್ ವಿವಾದಕ್ಕೆ ಮಧ್ಯಸ್ಥಿಕೆದಾರರಾಗಲು ಒಪ್ಪಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net