ವಿರೋಧ ಪಕ್ಷಗಳು ಅರಾಜಕತೆಯ ಮನಸ್ಥಿತಿ ಹೊಂದಿವೆ: ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಆಕ್ರೋಶ | Nitin Navin

ನಿತಿನ್ ನವೀನ್
ನಿತಿನ್ ನವೀನ್
Published on
ನವದೆಹಲಿ: ಸಂಸತ್ತಿನ ಅಧಿವೇಶನಗಳಿಗೆ ಪದೇ-ಪದೇ ಅಡ್ಡಿಪಡಿಸುವುದು ಮತ್ತು ಸಾರ್ವಜನಿಕ ವಿಷಯಗಳ ಕುರಿತು ಚರ್ಚೆಯನ್ನು ತಡೆಹಿಡಿಯಲು ವಿರೋಧ ಪಕ್ಷಗಳು ಮುಂದಾಗಿವೆ ಮತ್ತು ಅರಾಜಕತೆಯ ಮನಸ್ಥಿತಿ ಹೊಂದಿವೆ ಎಂದು ಬುಧವಾರ(ಆ. 12) ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್(Nitin Navin) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಯೊಂದು ಪ್ರಮುಖ ವಿಷಯದ ಬಗ್ಗೆ ಚರ್ಚಿಸಲು ಸಿದ್ಧವಿದೆ. ಆದರೆ ಪ್ರತಿಪಕ್ಷಗಳು ಸದನ ನಡೆಸುವುದಕ್ಕೆ ಅಡ್ಡಿಪಡಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ವಿರೋಧ ಪಕ್ಷಗಳ ನಡೆಯನ್ನು ಮತ್ತು ಬೆಳವಣಿಗೆಗಳನ್ನು ದೇಶದ ಜನ ಗಮನಿಸುತ್ತಿದ್ದಾರೆ. ಚರ್ಚೆಗಳಿಂದ ಯಾರು ಓಡಿಹೋಗುತ್ತಿದ್ದಾರೆಂದು ದೇಶದ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷಗಳಿಗೆ ಅಮಿತ್ ಶಾ ಸವಾಲ್

ಸಂಸತ್ತಿನ ಕಲಾಪಗಳಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಬುಧವಾರ(ಆ. 12) ವಿರೋಧ ಪಕ್ಷಗಳಿಗೆ 24 ಗಂಟೆಗಳ ಕಾಲಾವಕಾಶದ ಸುದೀರ್ಘ ಚರ್ಚೆಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಯಿಂದ ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ತಾವು ನಿರಂತರವಾಗಿ ಸದನದಲ್ಲಿಯೇ ಉಪಸ್ಥಿತನಾಗಿರುತ್ತೇನೆ. ವಿಪಕ್ಷಗಳು ಎತ್ತುವ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net