ಟೆಲಿಗ್ರಾಮ್​ನಲ್ಲಿ NEET 2026 ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾರಾಟ ಆರೋಪ; ಸೈಬರ್​ ಕ್ರೈಂ ಮೊರೆ ಹೋದ NTA

NEET 2026 paper leak
NEET 2026 paper leak
Published on
NEET 2026 paper leak: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ವಿದ್ಯಾರ್ಥಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶಿಕ್ಷಣ ಇಲಾಖೆಯ ಲೋಪದೋಷಗಳ ವಿರುದ್ಧ ಹೋರಾಡಲು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆಗೆ ಆಗ್ರಹಿಸಿ  ಜಿರಳೆ ಪಕ್ಷ ಪ್ರತಿಭಟನೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಮತ್ತೊಂದು ಅಘಾತಕಾರಿ ವಿಚಾರವೊಂದು ಹೊರಬಿದ್ದಿದೆ.

ಗ್ಯಾರಂಟಿ ಸ್ಕೋರ್​ ಕೊಡಿಸ್ತೇವೆ

ಹೌದು ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ತನಿಖೆಯು ಸದ್ಯ ಸಿಬಿಐ ಕೈನಲ್ಲಿದೆ. ಈ ಹೊತ್ತಲೇ ಆನ್​ಲೈನ್​ಲ್ಲಿ ಮತ್ತೊಂದು ವಂಚಕರ ಜಾಲ ಸೃಷ್ಟಿಯಾಗಿದೆ. ಜೂನ್​21ರಂದು ನಿಗದಿಯಾಗಿದ್ದ ನೀಟ್​ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒದಗಿಸುವುದಾಗಿ ಲಕ್ಷಾಂತರ ರೂಪಾಯಿಗಳ ಬದಲಿಗೆ 'ಗ್ಯಾರಂಟಿ ಸ್ಕೋರ್' ಕೊಡಿಸುವುದಾಗಿ ಹಲವು ಟೆಲಿಗ್ರಾಮ್​ನಲ್ಲಿ ಕೆಲವು ಚಾನೆಲ್​ಗಳು ಆಮಿಷವೊಡ್ಡುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.

ಯುವಕನ ಟ್ವೀಟ್​ನಲ್ಲಿ ಏನಿತ್ತು?

ಯುವಕರೊಬ್ಬರು ಎಕ್ಸ್​ನಲ್ಲಿ ಮೂರು ಟೆಲಿಗ್ರಾಂ ಅಕೌಂಟ್​ನ್ನು ಶೇರ್​ ಮಾಡಿ, ಈ ಖಾತೆಗಳನ್ನು ಒಬ್ಬ ವ್ಯಕ್ತಿ ನಿರ್ವಹಿಸುತ್ತಿದ್ದಾನೆ. ಈತ ಟೆಲಿಗ್ರಾಮ್​ನಲ್ಲಿ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದಾನೆ ಎಂದು ಸೈಬರ್ ಕ್ರೈಂ ಪೊಲೀಸರರಿಗೆ,  ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ)ಗೆ ಟ್ಯಾಗ್​ ಮಾಡಿ ವಿಷಯ ಮುಟ್ಟಿಸಿದ್ದರು.

ಎನ್​ಟಿಎ ಹೇಳಿದ್ದೇನು?

ವಿಚಾರವು ಗಂಭೀರವಾಗಿ  ತಿರುವು ಪಡೆದುಕೊಳ್ಳುವ ಮುನ್ನ ಮಾತನಾಡಿದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ) ಈ ಪ್ರಕರಣವನ್ನು ಸೈಬರ್​ ಕ್ರೈಂ ಪೊಲೀಸರಿಗೆ ವರ್ಗಾಯಿಸಲಾಗಿದೆ. ಅವರು ನಿಖರವಾಗಿ ತನಿಖೆ ನಡೆಸಿ, ವಂಚಕರನ್ನು ಶೀಘ್ರವೇ ಪತ್ತೆ ಹಚ್ಚಲಿದ್ದಾರೆ ಎಂದು ಹೇಳಿದೆ.

ಪರೀಕ್ಷೆ ರದ್ದು

ಮೇ.3ರಂದು ನೀಟ್​ ಯುಜಿ ಪರೀಕ್ಷೆಯ ಪ್ರಶ್ನೆ ಒಪತ್ರಿಕೆ ಸೋರಿಕೆಯಾಗಿದೆ ಎಂಬುದು ಸಾಬೀತಾತದ ಹಿನ್ನೆಲೆ ಇಡೀ ದೇಶದಲ್ಲಿ ನೀಟ್​ ಪರೀಕ್ಷೆ ರದ್ದು ಗೊಳಸಲಾಯಿತು. ಅದರ ಜೊತೆಗೆ ಅಕ್ರಮದಲ್ಲಿ ಭಾಗಿಯಾದವರನ್ನು ಶೀಘ್ರವೇ ಬಂಧಿಸಿ ಕ್ರಮಕೈಗೊಳ್ಳಲಾಯಿತು. ಆದರೂ ಸಹ ಇಲ್ಲಿಯವರೆಗೂ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುವ ಸವಾಲು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 

ವಿದ್ಯಾರ್ಥಿನಿ ಆತ್ಮಹತ್ಯೆ

ಜೂನ್​ 3ರಂದು ಮಧ್ಯಪ್ರದೇಶದ ಹೊಸ ಮೌಗಂಜ್ ಜಿಲ್ಲೆಯ ಮಗನಿಯಾ ಗ್ರಾಮದ ಆಕಾಂಕ್ಷಾ ಚತುರ್ವೇದಿ ಎಂಬ ಅಭ್ಯರ್ಥಿ ಸ್ವಾರಿ ಅಪ್ಪ ಇನ್ನು ನೀಟ್​ ಪರೀಕ್ಷೆ ಬರೆಯುವ ತಾಳ್ಮೆ ನನ್ನಲ್ಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆಕಾಂಕ್ಷ ಅವರ ತಂದೆ ರೈತರಾಗಿದ್ದು ಸಾಲ ಮಾಡಿ ಆಕೆಯನ್ನು ಓದಿಸುತ್ತಿದ್ದರು ಎನ್ನಲಗಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net